-->
ನೇಮಕಾತಿ ವಿಳಂಬದಿಂದ ಅರ್ಹ ಯುವ ಕೈಗಳಿಗೆ ಅನ್ಯಾಯವಾಗುತ್ತಿದೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಆಕ್ರೋಶ

ನೇಮಕಾತಿ ವಿಳಂಬದಿಂದ ಅರ್ಹ ಯುವ ಕೈಗಳಿಗೆ ಅನ್ಯಾಯವಾಗುತ್ತಿದೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಆಕ್ರೋಶ

ನೇಮಕಾತಿ ವಿಳಂಬದಿಂದ ಅರ್ಹ ಯುವ ಕೈಗಳಿಗೆ ಅನ್ಯಾಯವಾಗುತ್ತಿದೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಆಕ್ರೋಶ



ಸರ್ಕಾರಿ ನೇಮಕಾತಿ ವಿಳಂಬವಾದರೆ ವ್ಯವಸ್ಥೆಗೆ ನಷ್ಟವಾಗುತ್ತದೆ. ಇದರ ಜೊತೆಗೆ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯಾಗದೆ ಅನ್ಯಾಯವಾಗುತ್ತದೆ. ಅವರಿಗೂ ಗರಿಷ್ಟ ವಯಸ್ಸಾಗುತ್ತದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗ ಸಿಗದೆ ಅವರನ್ನು ಅನರ್ಹವನ್ನಾಗಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ  ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.

ಧಾರವಾಡದ ಪರಿಶಿಷ್ಟ ಜಾತಿ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಸ್ಥಳೀಯ ಮರಾಠಿ ಪತ್ರಿಕೆಯೊಂದು ವರದಿ ಮಾಡಿದೆ. ಇಲ್ಲಿನ ಎರಡರಿಂದ ಮೂರು ಹಾಸ್ಟೆಲ್‌ಗಳಲ್ಲಿ ಒಬ್ಬರೇ ವಾರ್ಡನ್‌, ಒಬ್ಬರೇ ಮೇಲ್ವಿಚಾರಕರು ಇದ್ದಾರೆ.

ಇದರಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಇದು ಅವರ ಫಲಿತಾಂಶದಲ್ಲಿ ವ್ಯತ್ಯಾಸ ಉಂಟು ಮಾಡಬಹುದು. ಈ ಕುರಿತು ಸಂಜ್ಞೇಯ ಪರಿಗಣಿಸುವುದು ಅಗತ್ಯ ಎಂದು ನಮಗೆ ಅನ್ನಿಸಿದೆ. ಈ ಸಂಬಂಧ ರಿಜಿಸ್ಟ್ರಿಯು ಅರ್ಜಿ ಸಿದ್ಧಪಡಿಸಿದೆ” ಎಂದು ನ್ಯಾಯಪೀಠ ಹೇಳಿದೆ.

“ರಾಜ್ಯದಲ್ಲಿ 200 ವಾರ್ಡನ್‌ ಹುದ್ದೆಗಳು ಮಂಜೂರಾಗಿವೆ. ಈ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ. ಇದರ ಅರ್ಥ ಇದುವರೆಗೆ ಮಂಜೂರಾಗಿರುವ ಹುದ್ದೆಗಳ ನೇಮಕವಾಗಿಲ್ಲ ಎಂಬುದಾಗಿದೆ. ಖಾಲಿ ಇರುವ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ತುಂಬಬೇಕು ಎಂಬುದಾಗಿ ಈಗಾಗಲೇ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ” ಎಂದು ಸಿಜೆ ವರಾಳೆ ಹೇಳಿದರು.

ನಿಯಮಿತವಾಗಿ ಹುದ್ದೆಗಳನ್ನು ತುಂಬಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ನಿಯಮಿತವಾಗಿ ನೇಮಕಾತಿ ನಡೆಸಬೇಕು ಎಂಬ ನಿಯಮವಿದೆ. ಆದರೆ, ನಮ್ಮ ಸಂವಿಧಾನದಲ್ಲಿ ಅಂತಹ ಉಲ್ಲೇಖವಿಲ್ಲ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನಿಯಮಿತವಾಗಿ ನೇಮಕಾತಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ. ನಮ್ಮ ಸಂವಿಧಾನ ನಿರ್ಮಾತೃಗಳು ಸರ್ಕಾರಗಳು ಮೈಮರೆತು ತಮ್ಮ ಕೆಲಸ ಹೀಗೆ ಮಾಡದೇ ಇರಬಹುದು ಎಂದು ಭಾವಿಸಲಿಲ್ಲ. ಎಲ್ಲರೂ  ಅವರ ಕೆಲಸ ಮಾಡಲಿದ್ದಾರೆ ಎಂದು ತಿಳಿದುಕೊಂಡರು. ಹೀಗಾಗಿ, ಅದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ” ಎಂದರು.

“ಸರ್ಕಾರವು ವರ್ಷಗಟ್ಟಲೇ ನೇಮಕಾತಿ ನಡೆಸದಿದ್ದರೆ ಕೇವಲ ವ್ಯವಸ್ಥೆಗೆ ಮಾತ್ರ ನಷ್ಟವಲ್ಲ. ಸಾಕಷ್ಟು ಅರ್ಹ ಅಭ್ಯರ್ಥಿಗಳಿಗೆ ವಯಸ್ಸಾಗಲಿದೆ. ಅವರು ಈ ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುತ್ತಾರೆ. ಇದರಿಂದಾಗಿ, ಸರ್ಕಾರ ಈ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತೀರಿ.  ಅವರನ್ನು ಅನರ್ಹರಾಗಿಸುತ್ತೀರಿ ಎಂದು ನ್ಯಾಯಪೀಠ ಹೇಳಿತು.

ನೇಮಕಾತಿ ಪ್ರಕ್ರಿಯೆ ಎಲ್ಲಾ ಇಲಾಖೆಗಳಲ್ಲೂ ನಿಯಮಿತವಾಗಿ ನಡೆಯಬೇಕು. ಪ್ರಸಾರ ಇಲ್ಲದ  ಪತ್ರಿಕೆಗಳಿಗೆ ನೇಮಕಾತಿ ಜಾಹೀರಾತು ನೀಡಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article