-->
ಪ್ರವೇಶಾನುಮತಿ ಬಳಿಕವೇ ಕಟ್ಟಡ ತೆರಿಗೆ: ಪೌರಾಡಳಿತ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

ಪ್ರವೇಶಾನುಮತಿ ಬಳಿಕವೇ ಕಟ್ಟಡ ತೆರಿಗೆ: ಪೌರಾಡಳಿತ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

ಪ್ರವೇಶಾನುಮತಿ ಬಳಿಕವೇ ಕಟ್ಟಡ ತೆರಿಗೆ: ಪೌರಾಡಳಿತ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್



ಸ್ಥಳೀಯ ಪೌರಾಡಳಿತ ಸಂಸ್ಥೆಗಳು ಪ್ರವೇಶ ಪತ್ರ (Occupancy Certificate)  ನೀಡಿದ ನಂತರವೇ ಆ ಪೌರಾಡಳಿತವು ಸದ್ರಿ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೈಸೂರು ಮೂಲಕ ಬಿ.ಎಂ. ಹ್ಯಾಬಿಟ್ಯಾಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಯಾವುದೇ ಒಂದು ಕಟ್ಟಡದ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅದು ಅಕ್ರಮ ಕಟ್ಟಡವಾಗುತ್ತದೆ. ಕಟ್ಟಡ ಪೂರ್ಣಗೊಂಡ ನಂತರ ಪ್ರವೇಶಾನುಮತಿ ಪತ್ರ(Occupancy Certificate)  ನೀಡಿದ ನಂತರವೇ ತೆರಿಗೆ ವಿಧಿಸಬಹುದು. ಅದಕ್ಕೆ ಬದಲಾಗಿ, ಮುಂಚಿತವಾಗಿ ತೆರಿಗೆ ವಿಧಿಸುವ ಹಾಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ

2010ರಲ್ಲಿ ಮೈಸೂರು ಮೂಲಕ ಬಿ.ಎಂ. ಹ್ಯಾಬಿಟ್ಯಾಟ್ ಸಂಸ್ಥೆಯು ಬೆಂಗಳೂರಿನಲ್ಲಿ ಮಾಲ್ ವೊಂದನ್ನು ನಿರ್ಮಾಣ  ಮಾಡಿತ್ತು. ಆದರೆ, ಮಲ್ಟಿಪ್ಲೆಕ್ಸ್ ನಡೆಸಲು ಜಿಲ್ಲಾಧಿಕಾರಿ NOC ನೀಡಲು ವಿಳಂಬ ಮಾಡಿದರು. ಅದೇ ರೀತಿ ಅಗ್ನಿಶಾಮಕ ದಳವೂ ಅನುಮೋದನೆ ನೀಡಲು ತಡ ಮಾಡಿತು. ಕಟ್ಟಡಕ್ಕೆ ಪ್ರವೇಶಾನುಮತಿ ಪತ್ರ ನೀಡುವಂತೆ ಕೋರಿ 2010ರ ಜುಲೈನಲ್ಲೇ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮನವಿಯನ್ನು ಪಾಲಿಕೆ ಪರಿಗಣಿಸಿರಲಿಲ್ಲ. ಹೀಗಾಗಿ, 2010ರ ಡಿಸೆಂಬರ್ 2ರಂದು ಮತ್ತೊಂದು ಮನವಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಪಾಲಿಕೆ ಅಧಿಕಾರಿಗಳು 2011ರ ಎಪ್ರಿಲ್ 25ರಂದು ಈ ಕಟ್ಟಡಕ್ಕೆ ಪ್ರವೇಶ ಪತ್ರವನ್ನು ನೀಡಿದ್ದರು. ಆದರೆ, ಅರ್ಜಿಯಲ್ಲಿ ಅರ್ಜಿದಾರರು ತಪ್ಪ ದಿನಾಂಕವನ್ನು ದಾಖಲಿಸಿದ್ದಾರೆ ಎಂದು ವಾದಿ ಸಂಸ್ಥೆಯಾದ ಬಿಬಿಎಂಪಿ ವಾದ ಮಂಡನೆ ಮಾಡಿತ್ತು.. 2008ರ ಜನವರಿ 17ರಂದು ಪಾಲಿಕೆ ಡಿಮ್ಯಾಂಡ್ ನೋಟೀಸನ್ನು ಜಾರಿಗೊಳಿಸಿದ್ದರು. ಈ ದಿನಾಂಕದಿಂದಲೇ ಆಸ್ತಿ ತೆರಿಗೆಯನ್ನು ಭರಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಪಾಲಿಕೆಯ ಈ ಆದೇಶವನ್ನು ಪ್ರಶ್ನಿಸಿ ವಾದಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.   

ಸರ್ಕಾರವೇ ರೂಪಿಸಿದ ಕಾನೂನು ಪ್ರಕಾರ, ಕಟ್ಟಡ ಪರಿಶೀಲನೆ ನಡೆಸಿದ ಬಳಿಕವೇ ಸ್ಥಳೀಯಾಡಳಿತವು ಪ್ರವೇಶ ಪತ್ರವನ್ನು ನೀಡಬೇಕು. ಈ ಪ್ರಕರಣದಲ್ಲಿ ಅರ್ಜಿದಾರರು ಕಟ್ಟಡ ಪೂರ್ಣಗೊಂಡಿರುವ ಬಳಿಕ ಪ್ರವೇಶ ಪತ್ರ  ನೀಡಿತ್ತು. 

Ads on article

Advertise in articles 1

advertising articles 2

Advertise under the article