ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಕೌಂಟ್ ಹ್ಯಾಕ್: FIR ದಾಖಲಿಸಿದ ಸೈಬರ್ ಪೊಲೀಸರು
ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಕೌಂಟ್ ಹ್ಯಾಕ್: FIR ದಾಖಲಿಸಿದ ಸೈಬರ್ ಪೊಲೀಸರು
ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರು ಸೈಬರ್ ವಂಚನೆಗೊಳಗಾಗಿದ್ದಾರೆ. ಅನಾಮಿಕ ಸಂದೇಶವೊಂದಕ್ಕೆ ಪಾನ್ ಕಾರ್ಡ್ ವಿವರ ನೀಡಿದ್ದ ನ್ಯಾಯಾಧೀಶರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ಹಣ ಲೂಟಿ ಮಾಡಿ ವಂಚಿಸಲಾಗಿದೆ.
ಬಾಂಬೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಡಿ. ಧನುಕಾ ಅವರು ವಂಚನೆಗೊಳಗಾದವರು. ಸೈಬರ್ ವಂಚನೆ ಬಗ್ಗೆ ಅವರು ಮುಂಬೈ ಪೊಲೀಸ್ ಸೈಬರ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಅಪರಿಚಿತ ಸಂಖ್ಯೆಯಿಂದ ಧನುಕಾ ಅವರ ಮೊಬೈಲ್ ಗೆ ಸಂದೇಶ ಬಂದಿತ್ತು. ಪಾನ್ ಕಾರ್ಡ್ ವಿವರಗಳನ್ನು ನವೀಕರಿಸಲು ವಿಫಲರಾದರೆ ಖಾತೆ ನಿಷ್ಕ್ರಿಯವಾಗಲಿದೆ ಎಂಬ ಎಚ್ಚರಿಕೆಯ ಸಂದೇಶ ಅದರಲ್ಲಿ ಇತ್ತು.
ಈ ಸಂದೇಶದಲ್ಲಿ ಇದ್ದ ಲಿಂಕ್ ಕ್ಲಿಕ್ ಮಾಡಿ ಪಾನ್ ವಿವರಗಳನ್ನು ನಮೂದಿಸಿದ ಬಳಿಕ ತಮ್ಮ ಖಾತೆಯಿಂದ 49,998/- ರೂ.ಗಳನ್ನು ದೋಚಲಾಯಿತು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ 2023ರಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದ ರಮೇಶ್ ದೇವಕಿನಂದನ್ ಧನುಕಾ ಅವರು ಕೆಲ ವಾರಗಳ ಹಿಂದಷ್ಟೇ ಈ ಸ್ಥಾನದಿಂದ ನಿವೃತ್ತಿಯಾಗಿದ್ದರು.