2024ರಲ್ಲಿ ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯಾರು..?
2024ರಲ್ಲಿ ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯಾರು..?
2024ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಮಹತ್ತರ ಬದಲಾಣೆಯಾಗಲಿದೆ. 2024ರ ವರ್ಷದಲ್ಲಿ ಸುಪ್ರೀಂ ಕೋರ್ಟ್ ಇಬ್ಬರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ.
ಅಲ್ಲದೆ, ಈಗಿನ ಸಿಜೆಐ ಸೇರಿದಂತೆ ನಾಲ್ವರು ಹಿರಿ ತಲೆಗಳು ನ್ಯಾಯಮೂರ್ತಿಗಳ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
ಪ್ರಸಕ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವಿ. ಚಂದ್ರಚೂಡ್ ಅವರು 2024ರ ನವೆಂಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಸಂಜೀವ್ ಖನ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಇನ್ನು 20240ರಲ್ಲಿ ಇತರ ಮೂವರು ಹಿರಿಯ ನ್ಯಾಯಮೂರ್ತಿಗಳು ನಿವೃತ್ತರಾಗಲಿದ್ದಾರೆ. ಅವರೆಂದರೆ, ನ್ಯಾ. ಅನಿರುದ್ಧ ಬೋಸ್, ನ್ಯಾ. ಎ.ಎಸ್. ಬೋಪಣ್ಣ ಮತ್ತು ನ್ಯಾ. ಹಿಮಾ ಕೊಹ್ಲಿ.
ನ್ಯಾ. ಕೊಹ್ಲಿ ಅವರ ನಿವೃತ್ತಿಯ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಎರಡಕ್ಕೆ ಕುಸಿಯಲಿದೆ.
ಈ ಮಧ್ಯೆ, ಹೊಸ ಪದೋನ್ನತಿಯಲ್ಲಿ ಕೊಲೀಜಿಯಂ ಪ್ರಕಾರ ನೇಮಕಾತಿ ನಡೆದರೆ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಈಗ ಸುಪ್ರೀಂ ಕೋರ್ಟ್ ವಿವಿಧ ನ್ಯಾಯಪೀಠಗಳ ಮುಂದೆ ಸುಮಾರು 80000 ಕೇಸುಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.
2023ರ ಮೂರನೇ ವಾರದಲ್ಲಿ ನ್ಯಾ. ಸಂಜಯ್ ಕಿಶನ್ ಕೌಲ್ ಅವರು ನಿವೃತ್ತರಾಗಿದ್ದು, ನ್ಯಾಯಮೂರ್ತಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ.