ಅರ್ಧದಲ್ಲೇ ಕೋರ್ಸ್ ತೊರೆದರೆ ಶುಲ್ಕ ವಾಪಸ್ ನೀಡಬೇಕು: ಶಿಕ್ಷಣ ಸಂಸ್ಥೆಗಳಿಗೆ ಕಹಿಯಾದ ಗ್ರಾಹಕ ನ್ಯಾಯಾಲಯದ ತೀರ್ಪು!
ಅರ್ಧದಲ್ಲೇ ಕೋರ್ಸ್ ತೊರೆದರೆ ಶುಲ್ಕ ವಾಪಸ್ ನೀಡಬೇಕು: ಶಿಕ್ಷಣ ಸಂಸ್ಥೆಗಳಿಗೆ ಕಹಿಯಾದ ಗ್ರಾಹಕ ನ್ಯಾಯಾಲಯದ ತೀರ್ಪು!
ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಮೇಲೆ ಶೈಕ್ಷಣಿಕ ಕೋಚಿಂಗ್ ಸೇವೆ ಬಗ್ಗೆ ಅತೃಪ್ತಿ ಹೊಂದಿದ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್ ತೊರೆದರೆ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನು ಶಿಕ್ಷಣ ಸಂಸ್ಥೆಗಳು ವಾಪಸ್ ನೀಡಬೇಕು ಎಂದು ಕೇರಳ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಜೆಬಾ ಸಲೀಂ Vs ವಿಎಲ್‌ಸಿಸಿ ಹೆಲ್ತ್‌ಕೇರ್ ಲಿ. ಪ್ರಕರಣದಲ್ಲಿ ಎರ್ನಾಕುಲಂ ಗ್ರಾಹಕ ನ್ಯಾಯಾಲಯ ಈ ತೀರ್ಪು ನೀಡಿದೆ.
ಶುಲ್ಕ ಪಾವತಿಸಿ ಶೈಕ್ಷಣಿಕ ಸಂಸ್ಥೆ ಸೇರಿದ್ದ ದೂರುದಾರ ವಿದ್ಯಾರ್ಥಿನಿ ತಾವು ಸೇರಿದ್ದ ಮೂರು ಕೋರ್ಸ್‌ಗಳನ್ನು ತೊರೆಯಲು ನಿರ್ಧರಿಸಿದರು. ಈ ಮೊದಲು ನೀಡಿದ್ದ ಭರವಸೆಯಂತೆ ಶೈಕ್ಷಣಿಕ ಸಂಸ್ಥೆ ತರಗತಿಗಳನ್ನು ಸರಿಯಾಗಿ ನಡೆಸಿಲ್ಲ ಹಾಗೂ ತಾನು ಪಾವತಿಸಿದ ಶುಲ್ಕವನ್ನು ಅವರ ಬಯಸಿಸಿದ ಇನ್ನೊಬ್ಬ ಯಾವುದೇ ವಿದ್ಯಾರ್ಥಿಯ ಶುಲ್ಕಕ್ಕೆ ಮರುಹೊಂದಿಕೆ ಮಾಡಿಕೊಳ್ಳುವುದಾಗಿ ಶಿಕ್ಷಣ ಸಂಸ್ಥೆ ನೀಡಿದ ಭರವಸೆಯು ಅನ್ಯಾಯದ ವ್ಯಾಪಾರ ಅಭ್ಯಾಸವಾಗಿದೆ ಎಂಬುದನ್ನು ಗ್ರಾಹಕ ನ್ಯಾಯಾಲಯ ಹೇಳಿದೆ.
ಕೋಚಿಂಗ್ ಸೆಂಟರ್‌ಗಳು ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ ಗ್ರಾಹಕ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ಫ್ಲಿಟ್ ಜೀ ಲಿ. Vs ಡಾ. ಮಿನತಿ ರಥ್ ಮತ್ತಿ ಇತರರು ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗ ನೀಡಿದ ತೀರ್ಪನ್ನು ಉಲ್ಲೇಖಿಸಿದೆ. ಸದ್ರಿ ಪ್ರಕಣದಲ್ಲಿ, ಒಮ್ಮೆ ಪಾವತಿಸಲಾದ ಶುಲ್ಕವನ್ನು ವಿದ್ಯಾರ್ಥಿಗೆ ಬೋಧನ ಮಾಡಲಾದ ಸೇವೆಯ ಇತರ ವೆಚ್ಚಗಳನ್ನು ಕಡಿತಗೊಳಿಸಿ ಉಳಿದ ಶುಲ್ಕವನ್ನು ಮರಳಿ ನೀಡಬೇಕು ಎಂಬ ತೀರ್ಪನ್ನು ಗ್ರಾಹಕ ನ್ಯಾಯಾಲಯ ಗಮನಿಸಿತು.
ಸರಿಯಾದ ಸಮಯಕ್ಕೆ ಆನ್‌ಲೈನ್ ಕ್ಲಾಸ್ ಮಾಡುವಲ್ಲೂ ಎದುರುದಾರ ಶಿಕ್ಷಣ ಸಂಸ್ಥೆ ವಿಫಲವಾಗಿದೆ ಎಂಬುದನ್ನು ಗಮನಿಸಿದ ಎರ್ನಾಕುಲಂನ ಮಾನ್ಯ ಗ್ರಾಹಕ ನ್ಯಾಯಾಲಯ. ವಿದ್ಯಾರ್ಥಿ ಪಾವತಿಸಿದ ರೂ. 279329/- ಮೊತ್ತದ ಶುಲ್ಕವನ್ನು ವಾಪಸ್ ನೀಡುವಂತೆ ಎದುರುದಾರರಿಗೆ ಆದೇಶ ನೀಡಿದೆ. ಜೊತೆಗೆ ದಂಡವಾಗಿ ರೂ. 50,000/- ಹಾಗೂ ವ್ಯಾಜ್ಯ ವೆಚ್ಚವಾಗಿ ರೂ. 10,000/-ನ್ನು ದೂರುದಾರ ವಿದ್ಯಾರ್ಥಿನಿಗೆ ನೀಡುವಂತೆ ಎದುರುದಾರರಿಗೆ ಆದೇಶ ನೀಡಿದೆ.
ಜೆಬಾ ಸಲೀಂ Vs ವಿಎಲ್‌ಸಿಸಿ ಹೆಲ್ತ್‌ಕೇರ್ ಲಿ. ಪ್ರಕರಣ
ಎರ್ನಾಕುಲಂ ಗ್ರಾಹಕ ನ್ಯಾಯಾಲಯ CC/22/2022
Judgement Date: 15 Nov 2023