ವೀಡಿಯೋ ಕಾನ್ಫರೆನ್ಸ್‌ಗೆ ಮತ್ತೆ ಹೈಕೋರ್ಟ್ ಅಸ್ತು: ಸೋಮವಾರದಿಂದಲೇ ವಿ.ಸಿ. ಸೇವೆ ಶುರು
ವೀಡಿಯೋ ಕಾನ್ಫರೆನ್ಸ್‌ಗೆ ಮತ್ತೆ ಹೈಕೋರ್ಟ್ ಅಸ್ತು: ಸೋಮವಾರದಿಂದಲೇ ವಿ.ಸಿ. ಸೇವೆ ಶುರು
ವೀಡಿಯೋ ಕಾನ್ಫರೆನ್ಸ್ ಸೇವೆ ಸ್ಥಗಿತಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಮತ್ತೆ ವಿ.ಸಿ. ಸೇವೆ ಶುರು ಮಾಡಿದೆ. ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಹೈಕೋರ್ಟ್, ಝೂಮ್ ಆಪ್ ನೋಂದಾವಣೆಯನ್ನು ಕಡ್ಡಾಯಗೊಳಿಸಿದೆ.
ಹೈಕೋರ್ಟ್‌ನ ಎಲ್ಲ ಪೀಠಗಳಲ್ಲೂ ಸೋಮವಾರದಿಂದಲೇ ವಿ.ಸಿ. ನಡೆಯಲಿದ್ದು, ಇದರಲ್ಲಿ ಭಾಗಿಯಾಗಲು ವಕೀಲರು, ಸ್ವಯಂ ಕಕ್ಷಿದಾರರು, ದಾವೆದಾರರಿಗೆ ಹೈಕೋರ್ಟ್ ಕಂಪ್ಯೂಟರ್ ವಿಭಾಗವು ಸುಧಾರಿತ ಮಾರ್ಗಸೂಚಿ ಪ್ರಕಟಿಸಿದೆ.
ಝೂಮ್ ಆಪ್‌ನಲ್ಲಿ ಮಾಧ್ಯದವರು ಸೇರಿದಂತೆ ವಕೀಲರು, ಪಾರ್ಟಿ ಇನ್ ಪರ್ಸನ್, ದಾವೆದಾರರು ಕಡ್ಡಾಯ ನೋಂದಣಿಗೆ ಸೂಚಿಸಲಾಗಿದೆ. ನೋಂದಣಿ ಮಾಡಿದವರಿಗೆ ಮಾತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ.
ನೋಂದಣಿ ಮಾಡುವ ವಕೀಲರು, ಪಕ್ಷಕಾರರು ಕಾಸ್ ಲಿಸ್ಟ್ ಪಟ್ಟಿ ಮತ್ತು ಪ್ರಕರಣದ ಸಂಖ್ಯೆಯ ಜೊತೆಗೆ ತಮ್ಮ ಹೆಸರನ್ನು ನೀಡಬೇಕು.
ಮಾಧ್ಯಮದ ವರದಿಗಾರರು ತಮ್ಮ ಹೆಸರು ಮತ್ತು ಪ್ರತಿನಿಧಿಸುವ ಸಂಸ್ಥೆಯ ಹೆಸರು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
ವಿದೇಶಗಳಿಂದ ವಿಚಾರಣೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅನುಮತಿ ಪಡೆದುಕೊಳ್ಳಬೇಕು ಎಂದು ರಿಜಿಸ್ತ್ರಿ ತಿಳಿಸಿದೆ.