-->
ಉತ್ಪ್ರೇಕ್ಷೆ, ಅತಿಶಯ, ವಾಣಿಜ್ಯೋಕ್ತಿ ಜಾಹೀರಾತಿನ ಭಾಗ: ಮೇಲಾಟಕ್ಕೆ ಅನುಮತಿ ಇದೆ ಎಂದ ಹೈಕೋರ್ಟ್‌!

ಉತ್ಪ್ರೇಕ್ಷೆ, ಅತಿಶಯ, ವಾಣಿಜ್ಯೋಕ್ತಿ ಜಾಹೀರಾತಿನ ಭಾಗ: ಮೇಲಾಟಕ್ಕೆ ಅನುಮತಿ ಇದೆ ಎಂದ ಹೈಕೋರ್ಟ್‌!

ಉತ್ಪ್ರೇಕ್ಷೆ, ಅತಿಶಯ, ವಾಣಿಜ್ಯೋಕ್ತಿ ಜಾಹೀರಾತಿನ ಭಾಗ: ಮೇಲಾಟಕ್ಕೆ ಅನುಮತಿ ಇದೆ ಎಂದ ಹೈಕೋರ್ಟ್‌!





ಜಾಹೀರಾತಿನಲ್ಲಿ ಬಳಸುವ ಅಡಿಬರಹ, ವಾಣಿಜ್ಯೋಕ್ತಿಗಳಲ್ಲಿ ಅತಿಶಯ ಮತ್ತು ಉತ್ಪ್ರೇಕ್ಷೆಗಳಿಗೆ ಅವಕಾಶ ಇದೆ. ಇದು ಸ್ಪರ್ಧಾತ್ಮಕ ಜಗತ್ತು. ಜಾಹೀರಾತು ಎಂಬುದು ವಾಣಿಜ್ಯೋಕ್ತಿಯ ಭಾಗವಾಗಿದ್ದು, ಸಂವಿಧಾನದ 19(1)(a) ವಿಧಿಯಡಿ ಮಾನ್ಯತೆ ಪಡೆದ ಅಂಶವಾಗಿದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ನ್ಯಾ. ಪ್ರತಿಭಾ ಎಂ. ಸಿಂಗ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

"ಕೆಂಟ್ ದೇತಾ ಹೈ ಸಬ್‌ಸೆ ಶುದ್ಧ ಪಾನಿ" ಎಂಬ ಕೆಂಟ್ ಕಂಪೆನಿಯ ಜಾಹೀರಾತನ್ನು ಆಕ್ಷೇಪಿಸಿ ಟಿಟಿಕೆ ಪ್ರೆಸ್ಟೀಜ್ ಕಂಪೆನಿಯು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (Advertising Statndards Council of India-ASCI) ಗೆ ದೂರು ನೀಡಿತ್ತು. 


ಈ ದೂರಿನ ವಿಚಾರಣೆ ನಡೆಸಿದ ASCI ಕೆಂಟ್ ಜಲ ಶುದ್ಧೀಕರಣ ಯಂತ್ರ ಕಂಪೆನಿ ವಿರುದ್ಧ ತೀರ್ಪು ನೀಡಿತು. ಸ್ವಚ್ಛ ನೀರನ್ನು ಕೆಂಟ್ ಯಂತ್ರಗಳು ನೀಡುತ್ತವೆ ಎಂಬ ಅಡಿಬಹರಕ್ಕೆ ಯಾವುದೇ ಸಾಕ್ಷ್ಯ ಇಲ್ಲದಿರುವುದರಿಂದ ಈ ಅಡಿ ಬರಹವನ್ನುಹಿಂದಕ್ಕೆ ಪಡೆಯಬೇಕು ಎಂದು 29-12-2023ಕ್ಕೆ ಆದೇಶ ನೀಡಿತ್ತು.



ಈ ಆದೇಶದಿಂದ ಬಾಧಿತರಾದ ಕೆಂಟ್ ಕಂಪೆನಿ, ಸದ್ರಿ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ನನವಿ ಸಲ್ಲಿಸಿತು.


ಕೆಂಟ್ ಆರ್‌ಒ ಸಿಸ್ಟಮ್ಸ್ Vs ಎಎಸ್‌ಸಿಐ ಮತ್ತಿತರರು

ದೆಹಲಿ ಹೈಕೋರ್ಟ್‌ Dated 18-01-2024


Ads on article

Advertise in articles 1

advertising articles 2

Advertise under the article