COP: ಮತ್ತೆ ಗಡುವು ವಿಸ್ತರಿಸಿದ ವಕೀಲರ ಪರಿಷತ್ತು- ಈ ವಕೀಲರಿಗೆ ಮಾತ್ರ ಅನ್ವಯ !
Monday, January 1, 2024
COP: ಮತ್ತೆ ಗಡುವು ವಿಸ್ತರಿಸಿದ ವಕೀಲರ ಪರಿಷತ್ತು- ಈ ವಕೀಲರಿಗೆ ಮಾತ್ರ ಅನ್ವಯ !
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್(COP) ಕೋರಿ ಅರ್ಜಿ ಸಲ್ಲಿಸಲು ವಿಧಿಸಲಾಗಿದ್ದ ಗಡುವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತೆ ಮುಂದೂಡಿದೆ.
ಕಂಪ್ಯೂಟರಿನಲ್ಲಿ ಪರಿಪಕ್ವತೆ ಸಾಧಿಸದ ವಕೀಲರ ಅನುಕೂಲಕ್ಕಾಗಿ ಮೂರನೇ ಬಾರಿಗೆ ಗಡುವನ್ನು ವಿಸ್ತರಿಸಲಾಗಿದೆ.
ಜನವರಿ 10, 2024ರೊಳಗೆ ಅಗತ್ಯವಿರುವ ಎಲ್ಲ ವಕೀಲರೂ ಸಿಓಪಿ ಕೋರಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಕೀಲರ ಸಿಓಪಿ ಸಲ್ಲಿಕೆ ಬಗ್ಗೆ ರಾಜ್ಯ ವಕೀಲರ ಪರಿಷತ್ತು ವರದಿಯನ್ನು ತಯಾರಿಸುತ್ತಿದೆ. ಈ ವರದಿಯನ್ನು ಭಾರತೀಯ ವಕೀಲರ ಪರಿಷತ್ತಿಗೆ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ. ಹಾಗಾಗಿ, ಮುಂದಕ್ಕೆ ಈ ಕುರಿತ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಕೆಎಸ್‌ಬಿಸಿ ಸ್ಪಷ್ಟಪಡಿಸಿದೆ.