-->
ಪಳನಿ ದೇವಳಕ್ಕೆ ಪ್ರವೇಶ: ಇದು ಪಿಕ್‌ನಿಕ್ ತಾಣವಲ್ಲ, ಹಿಂದೂವೇತರರಿಗೆ ಪ್ರವೇಶ ನಿರ್ಬಂಧ- ಮದ್ರಾಸ್ ಹೈಕೋರ್ಟ್ ಆದೇಶ

ಪಳನಿ ದೇವಳಕ್ಕೆ ಪ್ರವೇಶ: ಇದು ಪಿಕ್‌ನಿಕ್ ತಾಣವಲ್ಲ, ಹಿಂದೂವೇತರರಿಗೆ ಪ್ರವೇಶ ನಿರ್ಬಂಧ- ಮದ್ರಾಸ್ ಹೈಕೋರ್ಟ್ ಆದೇಶ

ಪಳನಿ ದೇವಳಕ್ಕೆ ಪ್ರವೇಶ: ಇದು ಪಿಕ್‌ನಿಕ್ ತಾಣವಲ್ಲ, ಹಿಂದೂವೇತರರಿಗೆ ಪ್ರವೇಶ ನಿರ್ಬಂಧ- ಮದ್ರಾಸ್ ಹೈಕೋರ್ಟ್ ಆದೇಶ





ತಮಿಳುನಾಡಿನ ಪಳನಿ ದೇವಾಲಯಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ. ಇದು ಪಿಕ್‌ನಿಕ್ ತಾಣವಲ್ಲ. ಹಿಂದೂಗಳಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಈ ಹಕ್ಕಿಗೆ ಮಧ್ಯಪ್ರವೇಶವಾದರೆ ಅದನ್ನು ನಿರ್ಬಂಧಿಸಲು ಅವರಿಗೂ ಅವಕಾಶ ಇದೆ ಎಂದು ಮದ್ರಾಸ್ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಡಿ. ಸೆಂಥಿಲ್ ಕುಮಾರ್ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮಧುರೈ ವಿಭಾಗೀಯ ಪೀಠದ ನ್ಯಾ. ಎಸ್. ಶ್ರೀಮತಿ ಅವರು ಈ ಆದೇಶ ಹೊರಡಿಸಿದ್ದಾರೆ.


ದೇವಸ್ಥಾನದ ಧ್ವಜ ಸ್ತಂಬದ ವರೆಗೆ ಮಾತ್ರ ಅನ್ಯರು ಪ್ರವೇಶಿಸಬಹುದು. ಆದರೆ, ಆ ಬಳಿಕ ಹಿಂದೂ ವೇತರರ ಪ್ರವೇಶವನ್ನು ನಿರ್ಬಂಧಿಸಬೇಕು. ಈ ಬಗ್ಗೆ ರಾಜ್ಯದ ಎಲ್ಲ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ನಾಮಫಲಕವವನ್ನು ಅಳವಡಿಸುವಂತೆ ನ್ಯಾಯಾಲಯದ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.



ಬುರ್ಖಾಧಾರಿ ಮುಸ್ಲಿಂ ಮಹಿಳೆಯರ ಗುಂಪೊಂದು ಪಳನಿ ಕ್ಷೇತ್ರಕ್ಕೆ ಭೇಟಿ ನೀಡಿದವನ್ನು ಆಕ್ಷೇಪಿಸಿ ಸ್ಥಳೀಯ ಬೊಂಬೆಯಂಗಡಿ ಇಟ್ಟುಕೊಂಡಿದ್ದ ಡಿ. ಸೆಂಥಿಲ್ ಕುಮಾರ್ ಈ ರಿಟ್ ಅರ್ಜಿಯನ್ನು ಹೈಕೋರ್ಟ್ ಮುಂದೆ ಸಲ್ಲಿಸಿದ್ದರು.


ಪ್ರಕರಣ: ಡಿ. ಸೆಂಥಿಲ್ ಕುಮಾರ್ Vs ತಮಿಳುನಾಡು ಸರ್ಕಾರ ಮತ್ತಿತರರು

ಮದ್ರಾಸ್ ಹೈಕೋರ್ಟ್ (ಮಧುರೈ ಪೀಠ), WP(MD) 18485/2023 Dated 30-01-2024




Ads on article

Advertise in articles 1

advertising articles 2

Advertise under the article