-->
ಮೊದಲು ಕೋರ್ಟ್‌ ಶಿಷ್ಟಾಚಾರ ಪಾಲಿಸಿ: ನ್ಯಾಯಾಂಗ ಸುಧಾರಣೆ ಅರ್ಜಿ ಹಾಕಿದ್ದ ವಕೀಲರಿಗೆ ಬುದ್ದಿವಾದ ಹೇಳಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

ಮೊದಲು ಕೋರ್ಟ್‌ ಶಿಷ್ಟಾಚಾರ ಪಾಲಿಸಿ: ನ್ಯಾಯಾಂಗ ಸುಧಾರಣೆ ಅರ್ಜಿ ಹಾಕಿದ್ದ ವಕೀಲರಿಗೆ ಬುದ್ದಿವಾದ ಹೇಳಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

ಮೊದಲು ಕೋರ್ಟ್‌ ಶಿಷ್ಟಾಚಾರ ಪಾಲಿಸಿ: ನ್ಯಾಯಾಂಗ ಸುಧಾರಣೆ ಅರ್ಜಿ ಹಾಕಿದ್ದ ವಕೀಲರಿಗೆ ಬುದ್ದಿವಾದ ಹೇಳಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್





ಮೊದಲು ನ್ಯಾಯಾಲಯದ ಶಿಷ್ಟಾಚಾರದ ಬಗ್ಗೆ ಹಿರಿಯ ವಕೀಲರಿಂದ ತರಬೇತಿ ಪಡೆದು ಬನ್ನಿ. ಆ ಬಳಿಕ ನ್ಯಾಯಾಂಗದ ಸುಧಾರಣೆ ಬಗ್ಗೆ ಆಲೋಚಿಸಿ ಎಂದು ವಕೀಲರೊಬ್ಬರಿಗೆ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್ ಬುದ್ದಿವಾದ ಹೇಳಿದ ಪ್ರಸಂಗ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.



ನೀವು ಯಾವ ರೈಲನ್ನು ಬೇಕಾದರೂ ಹತ್ತಿ ಹೋಗಲು ಇದು ರೈಲ್ವೇ ಪ್ಲ್ಯಾಟ್‌ಫಾರ್ಮ ಎಂದು ತಿಳಿದುಕೊಂಡಿದ್ದೀರಾ..? ಕೋರ್ಟ್‌ ರೂಮ್‌ನಲ್ಲಿ ಅನುಸರಿಸಬೇಕಾದ ಸಭ್ಯತೆ, ಶಿಷ್ಟಾಚಾರವನ್ನು ಹಿರಿಯ ವಕೀಲರಿಂದ ತಿಳಿದುಕೊಂಡು ಬನ್ನಿ ಎಂದು ಅರ್ಜಿ ಪಡೆಯುವಂತೆ ಧಾವಂತ ಮಾಡುತ್ತಿದ್ದ ವಕೀಲರೊಬ್ಬರಿಗೆ ಸಿಜೆಐ ಚಂದ್ರಚೂಡ್ ಖಡಕ್ ಆಗಿ ಮಾತಿನ ಚಾಟಿ ಏಟು ನೀಡಿದರು.


ಆ ವಕೀಲರು ಮಾಡಿದ್ದೇನು..?

ಸುಪ್ರೀಂ ಕೋರ್ಟ್‌ ಕಲಾಪ ನಡೆಯುತ್ತಿದ್ದಂತೆ ದಿಢೀರನೆ ಎದ್ದು ನಿಂತು "ನಾನು ನ್ಯಾಯಾಂಗದ ಸುಧಾರಣೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಿದ್ದೇನೆ. ಅದನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸತೊಡಗಿದರು.



ದಿನದ ಕಲಾಪದ ಪಟ್ಟಿಯಲ್ಲಿ ಈ ವಿಷಯ ಪಟ್ಟಿ ಆಗಿರಲೇ ಇಲ್ಲ. ಇದನ್ನು ನೋಡಿ ಕೆರಳಿದ ಸಿಜೆಐ, ನೀವು ವಕೀಲರೇ..? ಯಾವ ವಿಷಯವನ್ನು ಯಾವಾಗ ಮತ್ತು ಹೇಗೆ ಪ್ರಸ್ತಾಪಿಸಬೇಕು ಎಂದು ನೀವು ತಿಳಿದುಕೊಂಡಿರಬೇಕು ಎಂದು ನುಡಿದರು.


ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ..? ಎಂದು ಸಿಜೆಐ ಪ್ರಶ್ನಿಸಿದಾಗ, ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ ಎಂದು ಉದ್ದಟತನ ತೋರಿದ ಆ ವಕೀಲರು ಉತ್ತರಿಸಿದರು.


ಕೋರ್ಟ್‌ ರೂಮಿನಲ್ಲಿ ಶಿಷ್ಟಾಚಾರ ಪಾಲಿಸಬೇಕು. ಕೋರ್ಟ್‌ ರೂಮಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಹಿರಿಯ ವಕೀಲರಿಂದ ತಿಳಿದುಕೊಂಡು ಬನ್ನಿ ಎಂದು ಸಿಜೆಐ ಖಾರವಾಗಿ ಹೇಳಿದರು.



Ads on article

Advertise in articles 1

advertising articles 2

Advertise under the article