-->
ಸಂತ್ರಸ್ತೆ ಜೊತೆ ಮದುವೆ ಭರವಸೆ ನೀಡಿದ ಆರೋಪಿ: ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

ಸಂತ್ರಸ್ತೆ ಜೊತೆ ಮದುವೆ ಭರವಸೆ ನೀಡಿದ ಆರೋಪಿ: ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

ಸಂತ್ರಸ್ತೆ ಜೊತೆ ಮದುವೆ ಭರವಸೆ ನೀಡಿದ ಆರೋಪಿ: ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌





ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಿರ್ಧರಿಸಿದ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.


ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಆರೋಪಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಹೊರಡಿಸಿದೆ.



ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಆರೋಪಿ ನ್ಯಾಯಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದರು. ಇದನ್ನು ಪರಿಗಣಿಸಿ ಹೈಕೋರ್ಟ್ ಈ ತೀರ್ಪನ್ನು ಹೊರಡಿಸಿದೆ.



ವೈದ್ಯಕೀಯ ದಾಖಲೆಗಳು ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕಕ್ಕೆ ಒಳಗಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಇದೀಗ ಸಂತ್ರಸ್ತೆ ವಯಸ್ಕಳಾಗಿದ್ದಾಳೆ. ಸಂತ್ರಸ್ತೆ ಕೂಡ ನ್ಯಾಯಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ತಾನು ಆರೋಪಿಯೊಂದಿಗೆ ಪ್ರೀತಿಯಲ್ಲಿ ಇರುವುದಾಗಿಯೂ ಆತನನ್ನು ವಿವಾಹ ಆಗುವುದಾಗಿಯೂ ಹೇಳಿದ್ದಾರೆ.



ವಿಚಾರಣಾ ನ್ಯಾಯಾಲಯದಲ್ಲಿ ಸಂತ್ರಸ್ತೆ ಆರೋಪಿ ವಿರುದ್ಧ ಯಾವುದೇ ಸಾಕ್ಷ್ಯ ನುಡಿದಿಲ್ಲ. ಹೀಗಿದ್ದಾಗ ಕಾನೂನು ಪ್ರಕ್ರಿಯೆಯನ್ನು ಮುಂದುವರೆಯಲು ಅವಕಾಶ ನೀಡಿದರೆ ಸಂತ್ರಸ್ತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಆರೋಪಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.



ಇದೇ ವೇಳೆ, ಆರೋಪಿ ಸಂತ್ರಸ್ತೆಯನ್ನು ಒಂದು ತಿಂಗಳ ಒಳಗೆ ಮದುವೆಯಾಗಬೇಕು ಮತ್ತು ವಿವಾಹವನ್ನು ಸಕ್ಷಮ ಪ್ರಾಧಿಕಾರದ ಮುಂದೆ ನೋಂದಾಯಿಸಬೇಕು ಎಂಬ ಷರತ್ತು ವಿಧಿಸಿ ಪ್ರಕರಣವನ್ನು ರದ್ದುಪಡಿಸಿದೆ.


ಪ್ರಕರಣ: ಚಿಕ್ಕರೆಡಪ್ಪ Vs ಕರ್ನಾಟಕ ರಾಜ್ಯ 

ಕರ್ನಾಟಕ ಹೈಕೋರ್ಟ್, CrP 7066/2023 Dated 03-11-2023

Ads on article

Advertise in articles 1

advertising articles 2

Advertise under the article