"ಹದಿಹರೆಯದವರು ಸೆಕ್ಸ್ ಕಾಮನೆ ಅದುಮಿಡಬೇಕು": ಬುದ್ದಿವಾದ ಹೇಳಿದ್ದ ನ್ಯಾಯಪೀಠಕ್ಕೆ ಸುಪ್ರೀಂ ಕೋರ್ಟ್ ಛಾಟಿ ಮಾತು
"ಹದಿಹರೆಯದವರು ಸೆಕ್ಸ್ ಕಾಮನೆ ಅದುಮಿಡಬೇಕು": ಬುದ್ದಿವಾದ ಹೇಳಿದ್ದ ನ್ಯಾಯಪೀಠಕ್ಕೆ ಸುಪ್ರೀಂ ಕೋರ್ಟ್ ಛಾಟಿ ಮಾತು
ಹದಿಯರೆಯದ ಯುವತಿಯರು ಕ್ಷಣಕಾಲದ ಸುಖ ಬಯಸದೆ ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಬೇಕು ಎಂದು ಬುದ್ದಿವಾದ ಹೇಳಿದ್ದ ಕೊಲ್ಕತಾ ಹೈಕೋರ್ಟ್ ನ್ಯಾಯಪೀಠಕ್ಕೆ ಸುಪ್ರೀಂ ಕೋರ್ಟ್ ತಪರಾಕಿ ಹಾಕಿದೆ.
ಕೊಲ್ಕೊತ್ತಾ ಹೈಕೋರ್ಟ್ ತೀರ್ಪು ತಪ್ಪು ಸಂದೇಶ ಬೀರುತ್ತದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 482ರ ಅಡಿಯಲ್ಲಿ ನ್ಯಾಯಮೂರ್ತಿಗಳು ಅದು ಯಾವ ತತ್ವ ಅನ್ವಯಿಸಲು ಹೊರಟಿದ್ದಾರೆ ಎಂದು ಕಠಿಣ ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಹದಿಹರೆಯದ ಯುವತಿಯರು ಕ್ಷಣಿಕ ಸುಖಕ್ಕೆ ಶರಣಾಗುವ ಬದಲು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಬೇಕು ಎಂದು ಕೊಲ್ಕತಾ ಹೈಕೋರ್ಟ್ ನೀಡಿದ್ದ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಲೈಂಗಿಕ ಕಾಮನೆಗಳನ್ನು ಅದುಮಿಡುವ ಬುದ್ದಿವಾದ ಹೇಳಿದ ಹೈಕೋರ್ಟ್ ನ್ಯಾಯಪೀಠಕ್ಕೆ ಚಾಟಿ ಏಟಿನ ಮಾತುಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಹದಿಹರೆಯದವರಿಗೆ ಸಮಗ್ರ ಹಕ್ಕು ಆಧಾರಿತ ಲೈಂಗಿಕ ಶಿಕ್ಷಣ ನೀಡುವಂತೆ ಹೈಕೋರ್ಟ್ ಸಲಹೆ ನೀಡಿತ್ತು.
16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರನ್ನು ಒಳಗೊಳ್ಳುವ ಸಮ್ಮತಿಯ ಲೈಂಗಿಕ ಕ್ರಿಯೆಗಳನ್ನು ಅಪರಾಧ ಮುಕ್ತಗೊಳಿಸುವಂತೆ ಹೈಕೋರ್ಟ್ ನ್ಯಾಯಪೀಠ ವಿವಾದಾತ್ಮಕ ಸಲಹೆ ನೀಡಿತ್ತು.
ಹದಿಹರೆಯದವರು ಕರ್ತವ್ಯ ಮತ್ತು ಬಾಧ್ಯತೆಗಳನ್ನು ನಿರ್ವಹಿಸಬೇಕು. ಹದಿಹರೆಯದ ಹುಡುಗಿಯರು ಮತ್ತು ಹುಡುಗರ ಕರ್ತವ್ಯಗಳು ಬೇರೆ ಬೇರೆಯಾಗಿವೆ ಎಂದು ಹೈಕೋರ್ಟ್ ಬುದ್ದಿವಾದ ಹೇಳುವ ಮೂಲಕ ತೀರ್ಪು ವಿವಾದದ ಸ್ವರೂಪ ಪಡೆದಿತ್ತು.