-->
ವಿಭಜನೆ ದಾವೆಯ ಪ್ರಾಥಮಿಕ ಡಿಕ್ರಿ ಬಳಿಕ ಟ್ರಯಲ್ ಕೋರ್ಟ್‌ನಿಂದಲೇ ಫೈನಲ್ ಡಿಕ್ರಿ: ಹೈಕೋರ್ಟ್ ಮಹತ್ವದ ಸುತ್ತೋಲೆ

ವಿಭಜನೆ ದಾವೆಯ ಪ್ರಾಥಮಿಕ ಡಿಕ್ರಿ ಬಳಿಕ ಟ್ರಯಲ್ ಕೋರ್ಟ್‌ನಿಂದಲೇ ಫೈನಲ್ ಡಿಕ್ರಿ: ಹೈಕೋರ್ಟ್ ಮಹತ್ವದ ಸುತ್ತೋಲೆ

ವಿಭಜನೆ ದಾವೆಯ ಪ್ರಾಥಮಿಕ ಡಿಕ್ರಿ ಬಳಿಕ ಟ್ರಯಲ್ ಕೋರ್ಟ್‌ನಿಂದಲೇ ಫೈನಲ್ ಡಿಕ್ರಿ: ಹೈಕೋರ್ಟ್ ಮಹತ್ವದ ಸುತ್ತೋಲೆ



  • # ಸ್ಥಿರಾಸ್ತಿ ವಿಭಜನೆ ದಾವೆಗಳಲ್ಲಿ ಅಂತಿಮ ಡಿಕ್ರಿ ನಡವಳಿಯನ್ನು ವಿಚಾರಣಾ ನ್ಯಾಯಾಲಯವೇ ಸ್ವಯಂ ಪ್ರೇರಿತವಾಗಿ ಜರಗಿಸತಕ್ಕದ್ದು

  • # ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ ಕರ್ನಾಟಕ ಹೈಕೋರ್ಟ್


ಸ್ಥಿರಾಸ್ತಿ ವಿಭಜನೆ ಕೋರಿ ನ್ಯಾಯಾಲಯಗಳಲ್ಲಿ ಸಲ್ಲಿಸುವ ದಾವೆಗಳಲ್ಲಿ ವಿಚಾರಣಾ ನ್ಯಾಯಾಲಯವು ಪ್ರಥಮ ಹಂತದಲ್ಲಿ ತೀರ್ಪು ನೀಡಿ ಪಕ್ಷಕಾರರು ಹೊಂದಿರುವ ಹಕ್ಕಿನ ಅಂಶವನ್ನು ಘೋಷಿಸುತ್ತದೆ. ಅಂತೆಯೇ ಪ್ರಾರಂಭಿಕ ಡಿಕ್ರಿಯನ್ನು (Preliminary decree) ನೀಡಲಾಗುತ್ತದೆ. ಆದರೆ ವಿಭಜನೆಯ ದಾವೆಯು ಮುಕ್ತಾಯಗೊಳ್ಳಬೇಕಾದರೆ ಪಕ್ಷಕಾರರಿಗೆ ಭೌತಿಕವಾಗಿ ಸ್ಥಿರಾಸ್ತಿಯನ್ನು ವಿಭಜಿಸಿ ನೀಡತಕ್ಕದ್ದು. ಈ ಉದ್ದೇಶಕ್ಕೆ ಪಕ್ಷಕಾರರು ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ಡಿಕ್ರಿ (Final Decree) ಕೋರಿ ಎರಡನೇ ಹಂತದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಬೇಕಿತ್ತು.


ಸುಪ್ರೀಂ ಕೋರ್ಟ್ ಶುಭಕರನ್ ಪ್ರಸಾದ್ ಬುಬ್ನಾ ವಿರುದ್ಧ ಸೀತಾ ಸರನ್ ಬುಬ್ನಾ (2009 3 SCC 689) ಹಾಗೂ ಕಟ್ಟುಕಂಡಿ ಇಡತ್ತಿ ಕೃಷ್ಣನ್ ವಿರುದ್ಧ ಕಟ್ಟುಕಂಡಿ ಇಡತ್ತಿ ವಲ್ಸನ್ ಮತ್ತಿತರರು (2022 SCC online SC 737) ಈ ಎರಡು ಪ್ರಕರಣಗಳಲ್ಲಿ ಅಂತಿಮ ಡಿಕ್ರಿ ಕೋರಿ ಪಕ್ಷಕಾರರು ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ವಿಚಾರಣಾ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಅಂತಿಮ ಡಿಕ್ರಿ ನಡವಳಿಯನ್ನು ಜರಗಿಸತಕ್ಕದ್ದು ಎಂಬುದಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ RJ No. 3/2024 ದಿನಾಂಕ 3.1.2024 ಪ್ರಕಾರ ಸುತ್ತೋಲೆ ಹೊರಡಿಸಿದೆ.


ಸದರಿ ಸುತ್ತೋಲೆಯಲ್ಲಿ ಸೂಚಿಸಿದಂತೆ ಮೊದಲ ಹಂತದಲ್ಲಿ ವಿಚಾರಣಾ ನ್ಯಾಯಾಲಯವು ಪ್ರಾರಂಭಿಕ ಡಿಕ್ರಿ ನೀಡಿದ ಬಳಿಕ ಅಂತಿಮ ಡಿಕ್ರಿಯನ್ನು ನೀಡಲು ಸ್ವಯಂ ಪ್ರೇರಿತವಾಗಿ ನಡವಳಿಗಳನ್ನು ಜರಗಿಸತಕ್ಕದ್ದು. ಅಂತಿಮ ಡಿಕ್ರಿ ಕೋರಿ ಪಕ್ಷಕಾರರು ಪ್ರತ್ಯೇಕ ಪ್ರಕರಣವನ್ನು ದಾಖಲಿಸುವ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ. 


ಮುಂದುವರಿದು ವಿಚಾರಣಾ ನ್ಯಾಯಾಲಯಗಳು ಪ್ರಾರಂಭಿಕ ಡಿಕ್ರಿ ನೀಡಿದಂತಹ ಪ್ರಕರಣಗಳ ಯಾದಿ ತಯಾರಿಸಿ ಸಿವಿಲ್ ಪ್ರೊಸೀಜರ್ ಕೋಡ್ ನ ಕ್ರಮಾದೇಶ XX ನಿಯಮ 18 ರಡಿ ಸ್ವಯಂ ಪ್ರೇರಿತ ನಡವಳಿಯನ್ನು ಜರಗಿಸತಕ್ಕದ್ದು. ಹಾಗೂ ಸ್ಥಿರಾಸ್ತಿಯನ್ನು ವಿಭಜಿಸಿ ಪಕ್ಷಕಾರರ ಪ್ರತ್ಯೇಕ ಸ್ವಾಧೀನಕ್ಕೆ ನೀಡತಕ್ಕದ್ದು.


ಈ ನಿರ್ದೇಶನ ಪಾಲು ವ್ಯಾಜ್ಯಗಳಿಗೆ ಮಾತ್ರ ಸಂಬಂಧಪಟ್ಟಿದ್ದು ಅಡಮಾನ ದಾವೆ (Mortgage Suit) ಮತ್ತಿತರ ಅಂತಿಮ ಡಿಕ್ರಿ ನಡವಳಿ ಒಳಗೊಂಡಿರುವ ದಾವೆಗಳಿಗೆ ಅನ್ವಯಿಸತಕ್ಕದ್ದಲ್ಲ.


ವಿಚಾರಣಾ ನ್ಯಾಯಾಲಯಗಳು

ಈ ನಿರ್ದೇಶನವನ್ನು ಎಚ್ಚರಿಕೆಯಿಂದ ಪಾಲನೆ ಮಾಡತಕ್ಕದ್ದು. ಯಾವುದೇ ವಿಳಂಬವನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.


ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article