ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನ: ಆತ್ಮಹತ್ಯೆಗೆ ಪ್ರಯತ್ನಿಸಿದ ವಕೀಲ!
ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನ: ಆತ್ಮಹತ್ಯೆಗೆ ಪ್ರಯತ್ನಿಸಿದ ವಕೀಲ!
ನ್ಯಾಯಾಲಯದ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ವಕೀಲರೊಬ್ಬರು ನ್ಯಾಯಾಲಯದ ಆವರಣದಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ.
ವಕೀಲರಾದ ಶಿವಪೂಜನ್ ಜಾ ಅವರು ಕೋರ್ಟ್ ಛಾವಣಿಯಿಂದ ಜಿಗಿಯುವ ಮೂಲಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ವಕೀಲರಾದ ಶಿವಪೂಜನ್ ಜಾ ಮತ್ತು ಅವರ ಪತ್ನಿ ನಡುವೆ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಕೇಸ್‌ನ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ಬಳಿಕ ಮಾನ್ಯ ನ್ಯಾಯಾಲಯ ವಕೀಲರಿಗೆ 2.5 ಲಕ್ಷ ರೂ.ಗಳ ದಂಡ ವಿಧಿಸಿತ್ತು.
ನ್ಯಾಯಾಲಯದ ಈ ತೀರ್ಪಿನಿಂದ ವಕೀಲರು ತೀವ್ರ ಅಸಮಾಧಾನಗೊಂಡಿದ್ದರು. ತೀರ್ಪು ನೀಡಿದ ತಕ್ಷಣ ವಕೀಲ ಜಾ ಪಟ್ನಾ ಹೈಕೋರ್ಟ್ ಕಟ್ಟಡದ ಬಾಲ್ಕನಿಗೆ ತೆರಳಿ ಛಾವಣಿಯಿಂದ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸಿದರು.
ತಕ್ಷಣ ಎಚ್ಚೆಲ್ಲ ವಕೀಲರು ಹಾಗೂ ನ್ಯಾಯಾಲಯದ ಭದ್ರತಾ ಸಿಬ್ಬಂದಿ ವಕೀಲರನ್ನು ಸರಕ್ಷಿತವಾಗಿ ಕೆಳಗಿಸಿ ಪ್ರಾಣಾಪಾಯದಿಂದ ರಕ್ಷಿಸಿದರು.
ಈ ಘಟನೆಯನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದರು. ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಸ್ಥಳೀಯ ವಕೀಲರು ಜನರನ್ನು ಚದುರಿಸಿದರು.
ಇನ್ನೊಂದು ಘಟನೆ: ಅನಾರೋಗ್ಯದಿಂದ ವಕೀಲ ಆತ್ಮಹತ್ಯೆ
ದಕ್ಷಿಣ ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ 44 ವರ್ಷದ ವಕೀಲರೊಬ್ಬರು ಕಟ್ಟಡದಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆಯನ್ನು ದೃಢಪಡಿಸಿರುವ ಪೊಲೀಸರು, ವಕೀಲರ ಆತ್ಮಹತ್ಯೆಗೆ ಮುನ್ನ ಬರೆದಿದ್ದಾರೆ ಎನ್ನಲಾದ ಪತ್ರವನ್ನು ವಶಕ್ಕೆ ತೆಗೆದುಕೊಂಡಿದ್ದರು.
ವಕೀಲರು ಯಕೃತ್ತಿನ ಖಾಯಿಲೆಯಿಂದ ಬಳಲುತ್ತಿದ್ದರು.