ಆಳ್ವಾಸ್ ವಿದ್ಯಾರ್ಥಿನಿ ಈಗ ರಾಜ್ಯದ ನೂತನ ಸಿವಿಲ್ ಜಡ್ಜ್: ಗೀತಾ ಡಿ. ಅವರ ಯಶೋಗಾಥೆ ಇಲ್ಲಿದೆ!
ಆಳ್ವಾಸ್ ವಿದ್ಯಾರ್ಥಿನಿ ಈಗ ರಾಜ್ಯದ ನೂತನ ಸಿವಿಲ್ ಜಡ್ಜ್: ಗೀತಾ ಡಿ. ಅವರ ಯಶೋಗಾಥೆ ಇಲ್ಲಿದೆ!
ಮಂಗಳೂರಿನ ಯುವ ವಕೀಲರಾದ ಗೀತಾ ಡಿ. 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶರ ಹುದ್ದೆಗೇರಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ನಿವಾಸಿಯಾಗಿರುವ ಗೀತಾ, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಡ್ಜ್ ಆಗಿ ನಿವೃತ್ತರಾಗಿದ್ದ ಡಿ ಕಂಬೇಗೌಡ ಅವರ ಪುತ್ರಿ.
ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಬಿಎಸ್ಸಿ ಪದವಿ ಪೂರೈಸಿದ ಗೀತಾ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದರು.
2020ರಲ್ಲಿ ಕಾನೂನು ಪದವಿ ಪೂರೈಸಿದ ಬಳಿಕ ಹಿರಿಯ ವಕೀಲರಾದ ಮಯೂರ ಕೀರ್ತಿ ಮತ್ತು ಶರತ್ ಕುಮಾರ್ ಅವರ ಬಳಿ ಜೂನಿಯರ್ ಆಗಿ ವಕೀಲ ವೃತ್ತಿ ಆರಂಭಿಸಿದರು.
ಒಂದು ವರ್ಷದ ಹಿಂದೆ ಪುತ್ತೂರು ತಾಲೂಕಿನ ಚಾರ್ವಾಕ ಮೂಲದ ವಕೀಲರಾದ ಕಾರ್ತಿಕ್ ಮಾಚಿಲ ಅವರನ್ನು ಮದುವೆಯಾದ ಗೀತಾ ಅವರು, ಸತತ ಮೂರು ವರ್ಷಗಳಿಂದ ಸಿವಿಲ್ ಜಡ್ಜ್ ಪರೀಕ್ಷೆ ಬರೆಯುತ್ತಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ ಅವರು ಸಿವಿಲ್ ಜಡ್ಜ್ ಆಗಿ ನೇಮಕವಾಗುವ ಮೂಲಕ ಯಶಸ್ಸು ಗಳಿಸಿದರು.