-->
ಬಯಸಿದ ನೋಂದಣಿ ಕಚೇರಿಯಿಂದ ಆಸ್ತಿ ನೋಂದಣಿ ಅವಕಾಶ: ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾದ ರಾಜ್ಯ ಸರ್ಕಾರ, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ

ಬಯಸಿದ ನೋಂದಣಿ ಕಚೇರಿಯಿಂದ ಆಸ್ತಿ ನೋಂದಣಿ ಅವಕಾಶ: ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾದ ರಾಜ್ಯ ಸರ್ಕಾರ, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ

ಬಯಸಿದ ನೋಂದಣಿ ಕಚೇರಿಯಿಂದ ಆಸ್ತಿ ನೋಂದಣಿ ಅವಕಾಶ: ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾದ ರಾಜ್ಯ ಸರ್ಕಾರ, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ





ಇನ್ನು ಮುಂದೆ ನಾಗರಿಕರು ತಮ್ಮ ಆಸ್ತಿಯನ್ನು ತಮಗೆ ಅನುಕೂಲವಾದ ಅಥವಾ ತಾವು ಬಯಸಿದ ಯಾವುದೇ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಹೊಸ ವ್ಯವಸ್ಥೆ ಶೀಘ್ರದಲ್ಲಿ ರಾಜ್ಯದ್ಯಂತ ಜಾರಿಗೆ ಬರಲಿದೆ.


ಬೆಂಗಳೂರಿನಲ್ಲಿ ಇರುವ ಐದು ರಿಜಿಸ್ಟರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ 2015ರಲ್ಲಿ ಜಾರಿಗೆ ತಂದ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆಸ್ತಿಗಳ ನೋಂದಣಿ ಕಾರ್ಯ ಸರಳವಾಗಲಿದೆ ಎಂದು ಭಾವಿಸಲಾಗಿದೆ.


ರಾಜ್ಯದಲ್ಲಿ ವರ್ಷಕ್ಕೆ ಸುಮಾರು 25 ಲಕ್ಷ ನೋಂದಣಿಗಳ ಆಗುತ್ತಿವೆ. ಸರಕಾರ ಈ ವರ್ಷ 25,000 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಣೆಯ ಗುರಿ ನಿಗದಿ ಮಾಡಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಮತ್ತು ಇದು ನಾಗರಿಕರಿಗೆ ಅನುಕೂಲವೂ ಆಗಲಿದೆ.


ಬೆಂಗಳೂರಿನಲ್ಲಿ ಜಯನಗರ, ಶಿವಾಜಿನಗರ, ಬಸವನಗುಡಿ, ಗಾಂಧಿನಗರ ಹಾಗೂ ರಾಜಾಜಿನಗರ ಸಬ್ ರಿಜಿಸ್ಟರ್ ಜಿಲ್ಲೆಗಳಿವೆ. ಅವುಗಳ ವ್ಯಾಪ್ತಿಯಲ್ಲಿ 43 ಸಬ್ ರಿಜಿಸ್ಟರ್ ಕಚೇರಿಗಳಿವೆ. ಯಾರು ಎಲ್ಲಿಂದ ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ .


ಎರಡನೇ ಹಂತದಲ್ಲಿ ರಾಜ್ಯಾದ್ಯಂತ 42 ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸರಕಾರ ಯೋಜನೆ ರೂಪಿಸಿತ್ತು ಆದರೆ ಕಾರಣಾಂತರಗಳಿಂದ ಈ ಯೋಜನೆ ಜಾರಿಗೆ ಸಾಧ್ಯವಾಗಿರಲಿಲ್ಲ


ಎಲ್ಲಿಂದ ಬೇಕಾದರೂ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ತರಲು ನೋಂದಣಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಬಗ್ಗೆ ಕಾನೂನು ಮತ್ತು ಕಂದಾಯ ಇಲಾಖೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ, ಅಂತಿಮವಾಗಿ ಅಧಿಕಾರಿಗಳು ಕಾನೂನಿಗೆ ತಿದ್ದುಪಡಿಯ ಅಗತ್ಯವಿಲ್ಲ ಮತ್ತು ಈಗ ಇರುವ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಚಿಂತನೆಗೂ ಬಲ ಬಂದಿದೆ.


ಈಗ ಇರುವ ವ್ಯವಸ್ಥೆಯಲ್ಲಿ ಆಯಾ ಜಿಲ್ಲೆಯ ವ್ಯಾಪ್ತಿಯ ಆ ವ್ಯಾಪ್ತಿಗೆ ಸಂಬಂಧಿಸಿದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತದೆ.


ಮೊದಲಿಗೆ ಆಯಾ ಜಿಲ್ಲೆಯ ವ್ಯಾಪ್ತಿಯ ಯಾವುದೇ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಬಹುದು. ಮುಂದಿನ ವಿಸ್ತರಣೆ ಸಂದರ್ಭದಲ್ಲಿ ಯಾರು ಯಾವುದೇ ಜಿಲ್ಲೆಯಿಂದ ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು. ಈ ಕುರಿತ ತಂತ್ರಜ್ಞಾನವನ್ನು ಕಂದಾಯ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.


ಎಲ್ಲಿಂದ ಬೇಕಾದರೂ ಆಸ್ತಿ ನೋಂದಣಿ ಮಾಡಬಹುದು ಎಂಬ ವ್ಯವಸ್ಥೆ ಜಾರಿಗೆ ಬರೋದರಿಂದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗೋದಿಲ್ಲ. ಬದಲಿಗೆ ಜನರಿಗೆ ಸುಲಭ ಮತ್ತು ಶೀಘ್ರದಲ್ಲಿ ಸೇವೆ ಲಭ್ಯವಾಗುತ್ತದೆ. ತೆರಿಗೆ ಸಂಗ್ರಹಣೆಯ ನಿಗದಿತ ಗುರಿ ಸುಲಭವಾಗಿ ಸಾಧನೆಯಾಗುತ್ತದೆ.


ಈ ಯೋಜನೆ ಇದೀಗ ಪ್ರಯೋಗಿಕವಾಗಿ ತುಮಕೂರು ಮತ್ತು ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತದೆ. ಒಂದೆರಡು ತಿಂಗಳು ವ್ಯವಸ್ಥೆ ಗಮನಿಸಿದ ನಂತರ ಉಳಿದ ಜಿಲ್ಲೆಗಳಲ್ಲಿಯೂ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.



Ads on article

Advertise in articles 1

advertising articles 2

Advertise under the article