-->
ಜನ ಸೇವೆಗೆ ಅವಕಾಶ, ನ್ಯಾಯದಾನದಲ್ಲಿ ಪ್ರಾಮಾಣಿಕ ಕೆಲಸ ಮಾಡುವೆ: ನೂತನ ಸಿವಿಲ್ ಜಡ್ಜ್‌ ವರ್ಣಿಕಾ

ಜನ ಸೇವೆಗೆ ಅವಕಾಶ, ನ್ಯಾಯದಾನದಲ್ಲಿ ಪ್ರಾಮಾಣಿಕ ಕೆಲಸ ಮಾಡುವೆ: ನೂತನ ಸಿವಿಲ್ ಜಡ್ಜ್‌ ವರ್ಣಿಕಾ

ಜನ ಸೇವೆಗೆ ಅವಕಾಶ, ನ್ಯಾಯದಾನದಲ್ಲಿ ಪ್ರಾಮಾಣಿಕ ಕೆಲಸ ಮಾಡುವೆ: ನೂತನ ಸಿವಿಲ್ ಜಡ್ಜ್‌ ವರ್ಣಿಕಾ





ಮೈಸೂರಿನ ಚಾಮುಂಡಿ ವಿಹಾರ ಬಡಾವಣೆಯ ಆರ್. ವರ್ಣಿಕಾ ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.


ಕರ್ನಾಟಕ ಹೈಕೋರ್ಟ್ 2023ರ ವರ್ಷದಲ್ಲಿ ನಡೆಸಿದ ಸಿವಿಲ್ ಜಡ್ಜ್‌ ಪರೀಕ್ಷೆಯಲ್ಲಿ 33 ಸಿವಿಲ್ ನ್ಯಾಯಾಧೀಶರ ನೇಮಕಾತಿ ನಡೆಸಲಾಗಿದ್ದು, ಅದರಲ್ಲಿ ಒಬ್ಬರಾಗಿ ವರ್ಣಿಕಾ ಆರ್. ಸಾಧನೆ ಮಾಡಿದ್ದಾರೆ.


2018ರಲ್ಲಿ ಜೆಎಸ್‌ಎಸ್‌ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ನಾಲ್ಕನೇ Rank ನೊಂದಿಗೆ ಗಳಿಸಿದ ವರ್ಣಿಕಾ ಕಳೆದ ಮೂರು ವರ್ಷದಿಂದ ವಕೀಲರಾಗಿ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.


ಅಮ್ಮನ ಆಸೆ ಈಡೇರಿಸಿದ ತೃಪ್ತಿ ಇದೆ. ನನ್ನನ್ನು ನ್ಯಾಯಾಧೀಶರನ್ನಾಗಿ ನೋಡಲು ನನ್ನ ಅಮ್ಮ ಇರಬೇಕಿತ್ತು ಎಂದು ಹೇಳಿರುವ ವರ್ಣಿಕಾ ಜನರ ಸೇವೆ ಮಾಡಲು ನನಗೆ ಸದವಕಾಶ ದೊರೆತಿದೆ. ಬಡವರು, ನ್ಯಾಯ ಕೇಳಿ ಬಂದವರಿಗೆ ನ್ಯಾಯ ಸಿಗಬೇಕು. ಇದಕ್ಕಾಗಿ ನಾನು ಪ್ರಾಮಾಣಿಕ ಕೆಲಸ ಮಾಡುವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.



ನ್ಯಾಯಾಧೀಶರ ನೇಮಕಾತಿಯಲ್ಲಿ ಮೂರು ಹಂತದ ಪರೀಕ್ಷೆಗಳಿವೆ. ಪ್ರಾಯೋಗಿಕ ಜ್ಞಾನದೊಂದಿಗೆ ಪ್ರಚಲಿತ ವಿದ್ಯಮಾನದ ಅರಿವೂ ಇರಬೇಕು. ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ವಕೀಲರು ಈ ಪರೀಕ್ಷೆಯನ್ನು ಬರೆಯುತ್ತಾರೆ. ನಿರಂತರ ಅಧ್ಯಯನ, ಶ್ರಮ ಮತ್ತು ಕಾನೂನಿನ ಆಳವಾದ ಜ್ಞಾನ ಇದ್ದರೆ ತೇರ್ಗಡೆ ಆಗಬಹುದು ಎಂದು ಅವರು ವಿವರಿಸಿದರು.


ವರ್ಣಿಕಾ ಅವರ ತಂದೆ ರಘು ಆರ್. ಕೌಟಿಲ್ಯ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರೂ ಆಗಿದ್ದಾರೆ.



Ads on article

Advertise in articles 1

advertising articles 2

Advertise under the article