ರಾಜಕೀಯಕ್ಕೆ ಅಂಟಿಕೊಳ್ಳಬೇಡಿ: ಜಡ್ಜ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಚಂದ್ರಚೂಡ್ ಕಿವಿಮಾತು
Monday, February 5, 2024
ರಾಜಕೀಯಕ್ಕೆ ಅಂಟಿಕೊಳ್ಳಬೇಡಿ: ಜಡ್ಜ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಚಂದ್ರಚೂಡ್ ಕಿವಿಮಾತು
ಕಾನೂನು ಅಧಿಕಾರಿಗಳು ರಾಜಕೀಯದಿಂದ ಅಂತರ ಕಾಪಾಡಿಕೊಂಡು, ನ್ಯಾಯಾಂಗದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಅಟಾರ್ನಿ ಮತ್ತು ಸಾಲಿಸಿಟರ್ ಜನರಲ್ ಸಮ್ಮೇಳನದಲ್ಲಿ ಅವರು ಈ ಮಾತುಗಳನ್ನಾಡಿದ್ಧಾರೆ.
ಕಾನೂನಿನ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವ ಹೊಣೆಗಾರಕೆ ಈಗ ಪ್ರೈವೇಟ್ ಆಗಿ ವೃತ್ತಿ ಸೇವಯನ್ನು ಮಾಡುತ್ತಿರುವ ವಕೀಲರಿಗಿಂತ ಕಾನೂನು ಅಧಿಕಾರಿಗಳಿಗೆ ಹೆಚ್ಚಿದೆ.
ಕರ್ಯಾಂಗದ ಉತ್ತರದಾಯಿತ್ವ ಎಂಬುದು ನ್ಯಾಯಾಲಯದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಸರ್ಕಾರದ ಕಾನೂನು ಅಧಿಕಾರಿಗಳ ನೈತಿಕ ನಿಲುವುಗಳು ಮತ್ತು ಜವಾಬ್ದಾರಿಗಳನ್ನು ಹೆಚ್ಚು ಅವಲಂಬಿಸಿದೆ ಎಂದು ಸಿಜೆಐ ತಿಳಿಸಿದರು.