-->
ಕಲಾಪದಲ್ಲಿ ಜೀನ್ಸ್ ಧರಿಸಲು ಅನುಮತಿ: ಅರ್ಜಿ ಹಾಕಿದ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ಕಲಾಪದಲ್ಲಿ ಜೀನ್ಸ್ ಧರಿಸಲು ಅನುಮತಿ: ಅರ್ಜಿ ಹಾಕಿದ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ಕಲಾಪದಲ್ಲಿ ಜೀನ್ಸ್ ಧರಿಸಲು ಅನುಮತಿ: ಅರ್ಜಿ ಹಾಕಿದ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌





ನ್ಯಾಯಾಲಯಕ್ಕೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿರುವ ಬಗ್ಗೆ ಸಮರ್ಥನೆ ನೀಡಿದ ವಕೀಲರನ್ನು ಗುವಾಹಟಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


ನೀವು ಇವತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬರುತ್ತೇನೆ ಎಂದು ಮನವಿ ಮಾಡಿದ್ದೀರಿ. ಇದಕ್ಕೆ ಅನುಮತಿ ನೀಡಿದರೆ ನಾಳೆ ಹರಿದ ಜೀನ್ಸ್ ಪ್ಯಾಂಟ್‌ಗೂ ಅನುಮತಿ ನೀಡಲು ಬೇಡಿಕೆ ಇಡುತ್ತೀರಿ.. ಇನ್ನೊಂದು ದಿನ ಪೈಜಾಮಕ್ಕೂ ಮನವಿ ಮಾಡುತ್ತೀರಿ. ಈ ಮೂಲಕ ಸಮಸ್ಯೆಗಳ ಆಧಾರವನ್ನೇ ಸೃಷ್ಟಿಸುತ್ತೀರಿ ಎಂದು ಹೈಕೋರ್ಟ್‌ ನ್ಯಾಯಪೀಠ ವಕೀಲರ ವಿರುದ್ಧ ಕೆಂಡಮಂಡಲವಾಗಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಮರುಪರಿಶೀಲಸಲು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯ ಪೀಠ ವಜಾಗೊಳಿಸಿದೆ.


2023ರ ಜನವರಿ 7ರಂದು ಬಿಜೊನ್ ಕುಮಾರ್ ಮಹಾಜನ್ ಎಂಬ ವಕೀಲರು ಜೀನ್ಸ್ ಪ್ಯಾಂಟ್ ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದನ್ನು ಗಮನಿಸಿದ್ದ ನ್ಯಾಯಾಲಯವು ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ವಕೀಲರನ್ನು ತಕ್ಷಣ ನ್ಯಾಯಾಲಯದ ಆವರಣದಿಂದಲೇ ಪೊಲೀಸರಿಗೆ ಆದೇಶ ನೀಡಿತ್ತು.


ನ್ಯಾಯಾಲಯವು ಆ ದಿನ ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ ಭಾರತದ ಬಾರ್ ಕೌನ್ಸಿಲ್ ನಿಯಮ 49ರಲ್ಲಿ ಜೀನ್ಸ್ ಧರಿಸಬಾರದು ಎಂದು ಉಲ್ಲೇಖಿಸಲಾಗಿದೆ.


ಆದರೆ ಗುವಾಹಟಿ ಹೈಕೋರ್ಟ್ ನಿಯಮ 2010ರ ಪ್ರಕಾರ ಜೀನ್ಸ್ ಧರಿಸಬಾರದು ಎಂದು ಉಲ್ಲೇಖಿಸಿಲ್ಲ. ಹೀಗಾಗಿ ಅರ್ಜಿದಾರರನ್ನು ಡಿ-ಕೋರ್ಟ್‌ ಮಾಡು ಸಾಧ್ಯವಿಲ್ಲ ಎಂದು ಮನವಿಯಲ್ಲಿ ವಾದ ಮಂಡಿಸಲಾಗಿತ್ತು.


ನಿಯಮದಲ್ಲಿ ಜೀನ್ಸ್ ಬಗ್ಗೆ ಉಲ್ಲೇಖಿಸಿಲ್ಲ ಎನ್ನುವ ಕಾರಣಕ್ಕಾಗಿ ಇಂದು ಜೀನ್ಸ್ ಪ್ಯಾಂಟ್ ಧರಿಸಲು ಅನುಮತಿ ನೀಡಿದರೆ ನಾಳೆ ನೀವು ಹರಿದ ಜೀನ್ಸ್‌, ಫೇಡೆಡ್ ಜೀನ್ಸ್ ಹಾಕಿಕೊಂಡು ಬರುತ್ತೀರಿ... ಪೈಜಾಮ ಧರಿಸಲು ಅನುಮತಿ ಕೇಳುತ್ತೀರಿ... ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಅರ್ಜಿಯನ್ನು ತಿರಸ್ಕರಿಸಿತು.



Ads on article

Advertise in articles 1

advertising articles 2

Advertise under the article