ಇನ್ನು ಮುಂದೆ ಆನ್‌ಲೈನ್ ನಲ್ಲೇ ಹಿಂದೂ ವಿವಾಹ ನೋಂದಣಿ: ಸಂಪುಟ ಒಪ್ಪಿಗೆ
Sunday, February 4, 2024
ಇನ್ನು ಮುಂದೆ ಆನ್‌ಲೈನ್ ನಲ್ಲೇ ಹಿಂದೂ ವಿವಾಹ ನೋಂದಣಿ: ಸಂಪುಟ ಒಪ್ಪಿಗೆ
ಹಿಂದೂಗಳ ವಿವಾಹ ನೋಂದಣಿಯನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಮಾಡಲು ಅವಕಾಶ ಕಲ್ಪಿಸುವ ಹಿಂದೂ ವಿವಾಹಗಳ ನೋಂದಣಿ (ಕರ್ನಾಟಕ) (ತಿದ್ದುಪಡಿ) ನಿಯಮಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಇದುವರೆಗೆ ಈ ಅಧಿಕಾರ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಇರುವ ಎಲ್ಲ ಗ್ರಾಮ ಪಂಚಾಯತ್‌ಗಳ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ -1 ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದೆ.