-->
ದೋಷಾರೋಪ ಪಟ್ಟಿ ಮಾರ್ಪಾಡು: ಟ್ರಯಲ್ ಕೋರ್ಟ್‌ನ ಅಧಿಕಾರ- ಕರ್ನಾಟಕ ಹೈಕೋರ್ಟ್‌

ದೋಷಾರೋಪ ಪಟ್ಟಿ ಮಾರ್ಪಾಡು: ಟ್ರಯಲ್ ಕೋರ್ಟ್‌ನ ಅಧಿಕಾರ- ಕರ್ನಾಟಕ ಹೈಕೋರ್ಟ್‌

ದೋಷಾರೋಪ ಪಟ್ಟಿ ಮಾರ್ಪಾಡು: ಟ್ರಯಲ್ ಕೋರ್ಟ್‌ನ ಅಧಿಕಾರ- ಕರ್ನಾಟಕ ಹೈಕೋರ್ಟ್‌





ದಂಡ ಪ್ರಕ್ರಿಯಾ ಸಂಹಿತೆ ಕಲಂ 216 ಮತ್ತು 217ರ ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಮಾರ್ಪಾಡು ಮಾಡುವ ಅಧಿಕಾರ ಅಭಿಯೋಜನೆಗೆ ಇಲ್ಲ. ಆದರೆ, ಈ ಮಾರ್ಪಾಡನ್ನು ವಿಚಾರಣಾ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.



ಅಭಿಯೋಜನೆಯ ಅರ್ಜಿಯನ್ನು ಪುರಸ್ಕರಿಸಿ ಚಾರ್ಜ್‌ ಸೀಟ್‌ನ ಮಾರ್ಪಾಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರಾದ ಶಿವಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.



ಪ್ರಕರಣದ ವಿಚಾರಣೆಯ ಹಂತದಲ್ಲಿ ಇರುವಾಗ ಸೆಕ್ಷನ್‌ 304A ಗೆ ಬದಲಾಗಿ ಸೆಕ್ಷನ್‌ 304ರಡಿ ವಿಚಾರಣೆ ನಡೆಸುವಂತೆ ಅಭಿಯೋಜನೆಯ ಪರವಾಗಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿತ್ತು. ಈ ಅರ್ಜಿಯನ್ನು ವಿರೋಧಿಸಿ ಆರೋಪಿತರು ತಕರಾರು ಸಲ್ಲಿಸಿದ್ದರು. ವಾದ ಆಲಿಸಿದ ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಿತ್ತು.



ಇದರಿಂದ ಬಾಧಿತರಾದ ಆರೋಪಿತರು, ಮಾನ್ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.



ಮುನಿವಾಹಿನಿ ವಿ.ಕೆ. ಚಕ್ರಪಾಣಿ (2023) ಮತ್ತು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿದ ಪಿ. ಕಾರ್ತಿಕಲಕ್ಷ್ಮಿ Vs ಶ್ರೀ ಗಣೇಶ್ ಮತ್ತಿತರರು (2017) ಪ್ರಕರಣದಲ್ಲಿ ನೀಡಿದ ತೀರ್ಪನ್ನು ಆಧರಿಸಿದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.



prosecution has no right to apply for modification of the chargesheet under section 216 and 217 of criminal procedure code.

Only Trial Court can suo motu exercise power to modifiy or alter the chargesheet, held Karnatka High Court.

a single bench consisting J. S. Vishwajith Shetty.


ಶಿವಪ್ಪ Vs ಕರ್ನಾಟಕ ರಾಜ್ಯ

ಕರ್ನಾಟಕ ಹೈಕೋರ್ಟ್‌, Crl.R.P. 100280/2022 Dated 7-02-2024




Ads on article

Advertise in articles 1

advertising articles 2

Advertise under the article