ಪಂಜಾಬ್ ಪಾಲಿಕೆ ಚುನಾವಣೆಯಲ್ಲಿ ಪ್ರಜಾಸತ್ತೆಯ ಕಗ್ಗೊಲೆ: ಎಲೆಕ್ಷನ್ ಆಫೀಸರ್ ಮೇಲೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ
ಪಂಜಾಬ್ ಪಾಲಿಕೆ ಚುನಾವಣೆಯಲ್ಲಿ ಪ್ರಜಾಸತ್ತೆಯ ಕಗ್ಗೊಲೆ: ಎಲೆಕ್ಷನ್ ಆಫೀಸರ್ ಮೇಲೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ
ಪಂಜಾಬ್‌ನ ಚಂಡೀಗಢ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಮೇಯರ್ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಚುನಾವಣಾಧಿಕಾರಿಯನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಬೇಕು ಎಂದು ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಚುನಾವಣಾಧಿಕಾರಿ ಮತಪತ್ರವನ್ನು ವಿರೂಪಗೊಳಿಸಿರುವುದನ್ನು ವೀಡಿಯೋ ದೃಶ್ಯಾವಳಿಯಲ್ಲಿ ಸ್ಟಪ್ಟವಾಗಿ ಎದ್ದುಕಾಣುತ್ತಿದೆ ಎಂಬುದನ್ನು ಸ್ವತಃ ನ್ಯಾಯಪೀಠ ಗಮನಿಸಿದ್ದು, ಚುನಾವಣಾಧಿಕಾರಿಯ ಈ ವರ್ತನೆಗೆ ಸಿಜೆಐ ಸಹಿತ ಎಲ್ಲ ನ್ಯಾಯಾಧೀಶರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ, ಪಾಲಿಕೆಯ ಎಲ್ಲ ಚಟುವಟಿಕೆಗಳನ್ನು ಸುಪ್ರೀಂ ಕೋರ್ಟ್ ಮುಂದಿನ ಆದೇಶದ ವರೆಗೆ ತಡೆ ಹಿಡಿದಿದೆ.
ಅಧಿಕಾರಿ ಮತಪತ್ರ ವಿರೂಪಗೊಳಿಸಿರುವುದು ವೀಡಿಯೋ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು. ಅರು ಯಾಕೆ ಕ್ಯಾಮರಾ ನೋಡುತ್ತಿದ್ದಾರೆ? ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ವೀಡಿಯೋ ದೃಶ್ಯಾವಳಿ ನೋಡಿದ ಬಳಿಕ ನ್ಯಾಯಪೀಠ ದಿಗ್ಭ್ರಮೆಗೊಂಡು ಅಭಿಪ್ರಾಯ ವ್ಯಕ್ತಪಡಿಸಿತು.
ಚುನಾವಣಾಧಿಕಾರಿ ನಡೆದುಕೊಳ್ಳುವ ರೀತಿಯೇ ಇದು..? ಆತ ಕೆಳ ಭಾಗದಲ್ಲಿ ಕ್ರಾಸ್ ಚಿಹ್ನೆ ಇರುವೆಡೆ ಅದನ್ನು ಮುಟ್ಟುವುದಿಲ್ಲ. ಆದರೆ, ಮೇಲ್ಭಾಗದಲ್ಲಿ ಇದ್ದಾಗ ಅದನ್ನು ತಿರುಚುತ್ತಾನೆ. ಸುಪ್ರೀಂ ಕೋರ್ಟ್ ಇದನ್ನು ಗಮನಿಸಿದೆ. ದಯವಿಟ್ಟು ಈ ವಿಷಯವನ್ನು ಆತನಿಗೆ ತಿಳಿಸಿ ಎಂದು ಖಾರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು.
ಪ್ರಕರಣ: ಕುಲದೀಪ್ ಕುಮಾರ್ Vs ಚಂಡೀಗಢ ಕೇಂದ್ರಾಡಳಿತ ಸರ್ಕಾರ ಮತ್ತಿತರರು
ಸುಪ್ರೀಂ ಕೋರ್ಟ್