ಚೆಕ್ ಅಮಾನ್ಯ ಪ್ರಕರಣ: ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು, 4.4 ಲಕ್ಷ ದಂಡ
ಚೆಕ್ ಅಮಾನ್ಯ ಪ್ರಕರಣ: ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು, 4.4 ಲಕ್ಷ ದಂಡ
ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿದ ಗ್ರಾಮ ಲೆಕ್ಕಾಧಿಕಾರಿ ಬಿ.ಎಂ.ಅರ್ ತೇಜಸ್ವಿ ಬಿನ್ ರುದ್ರಪ್ಪ ಎಂಬಾತನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 4.40 ಲಕ್ಷ ರೂ ದಂಡ ವಿಧಿಸಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ.
ಹೊಳಲ್ಕೆರೆಯ ಸಿದ್ದೇಶಪ್ಪ. ಎ ಎಂಬುವವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಹೊಳಲ್ಕೆರೆಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಫಿರ್ಯಾದಿ ಪರವಾಗಿ ವಕೀಲರಾದ ಆರ್. ಹನುಮಂತಪ್ಪ ಅವರು ವಾದ ಮಂಡಿಸಿದ್ದರು.
ಆರೋಪಿ ಗ್ರಾಮ ಲೆಕ್ಕಾಧಿಕಾರಿ ಬಿ.ಎಂ.ಅರ್ ತೇಜಸ್ವಿ ಬಿನ್ ರುದ್ರಪ್ಪ ಫಿರ್ಯಾದಿಗೆ ಚೆಕ್ ನೀಡಿ ವಂಚಿಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಉಮೇಶ ಎಂ.ಪಿ. ಅವರು ಈ ಈ ಶಿಕ್ಷೆ ಪ್ರಕಟವಾಗಿದೆ.
ಆರೋಪಿಯಾದ 4.40 ಲಕ್ಷ ರೂ ದಂಡ ತೆರಲು ತಪ್ಪಿದರೆ ಇನ್ನು ಮೂರು ತಿಂಗಳು ಜೈಲು ವಾಸ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ: ಸಿದ್ದೇಶಪ್ಪ Vs ತೇಜಸ್ವಿ ಬಿ.ಎಂ.
ಹೊಳಲ್ಕೆರೆ PCJ & JMFC ನ್ಯಾಯಾಲಯ, CC No. 479/2021, Dated 03-02-2024