ಪೌತಿ ಖಾತೆ ಆಂದೋಲನ: ಕಂದಾಯ ಇಲಾಖೆಯಿಂದ ತಿದ್ದುಪಡಿ ಸುತ್ತೋಲೆ
Sunday, February 4, 2024
ಪೌತಿ ಖಾತೆ ಆಂದೋಲನ: ಕಂದಾಯ ಇಲಾಖೆಯಿಂದ ತಿದ್ದುಪಡಿ ಸುತ್ತೋಲೆ
ಪೌತಿ ಯಾ ವಾರಸಾ ಖಾತೆ ಆಂದೋಲನ ನಡೆಸುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಂದಾಯ ಇಲಾಖೆಯ ಭೂ ಕಂದಾಯ ಮತ್ತು ಭೂ ಸುಧಾರಣಾ ಕೋಶದ ಅಧೀನ ಕಾರ್ಯದರ್ಶಿ ವಿಮಲಮ್ಮ ಸಿ. ಅವರು ದಿನಾಂಕ 10-01-2024ರಂದು ಸುತ್ತೋಲೆ ಹೊರಡಿಸಿದ್ದಾರೆ.
ಅಡೆ ತಡೆಗಳಿದ್ದ ಸಂದರ್ಭದಲ್ಲಿ ಮಾತ್ರ ಸೂಕ್ತ ಅಫಿಡವಿಟ್‌ನ್ನು ಮತ್ತು ದಾಖಲಾತಿಗಳೊಂದಿಗೆ 4 (ಅ) ರೀತಿಯಲ್ಲಿ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಸುತ್ತೋಲೆಯನ್ನು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು, ಕಂದಾಯ ಆಯುಕ್ತಾಲಯದ ಆಯುಕ್ತರು, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು, ಭೂಮಿ ಮತ್ತು UPOR ನಿರ್ದೇಶಕರು, ಜಿಲ್ಲಾಧಿಕಾರಿಗಳ ಮೂಲಕ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸುತ್ತೋಲೆಯನ್ನು ಕಳುಹಿಸಿಕೊಡಲಾಗಿದೆ.