ವಕೀಲರಿಂದ ವರ್ಷಕ್ಕೆ ಕನಿಷ್ಟ ಒಂದು ಪ್ರಕರಣದ ಕಡ್ಡಾಯ ಕಾನೂನು ನೆರವು: ಬಿಸಿಐಗೆ ಸಂಸದೀಯ ಸಮಿತಿ ಸಲಹೆ
Wednesday, February 7, 2024
ವಕೀಲರಿಂದ ವರ್ಷಕ್ಕೆ ಕನಿಷ್ಟ ಒಂದು ಪ್ರಕರಣದ ಕಡ್ಡಾಯ ಕಾನೂನು ನೆರವು: ಬಿಸಿಐಗೆ ಸಂಸದೀಯ ಸಮಿತಿ ಸಲಹೆ
ವಕೀಲರು ಅಖಿಲ ಭಾರತ ವಕೀಲರ ಪರಿಷತ್ತು ಅಥವಾ ರಾಜ್ಯ ವಕೀಲರ ಪರಿಷತ್ತಿನಿಂದ ಪರಿಹಾರ ಪಡೆಯಬೇಕಿದ್ದರೆ ಪ್ರತಿ ನೋಂದಾಯಿತ ವಕೀಲರಿಂದ ಕನಿಷ್ಟ ವರ್ಷಕ್ಕೊಂದು ಪ್ರಕರಣದ ಕಡ್ಡಾಯ ಕಾನೂನು ನೆರವು ಸಲ್ಲಿಸಬೇಕು ಎಂಬ ನಿರ್ದೇಶನವನ್ನು ಹೊರಡಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಸಂಸದೀಯ ಸಮಿತಿ ಸಲಹೆ ನೀಡಿದೆ.
ಇದರಿಂದ ಕಾನೂನು ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಸುಶೀಲ್ ಕುಮಾರ್ ಮೋದಿ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987ರ ಪರಿಶೀಲನಾ ವರದಿಯನ್ನು ಮಂಡಿಸಿ ಸಲಹೆ ನೀಡಿದ್ದಾರೆ.
ಅದೇ ರೀತಿ, ಸುಪ್ರೀಂ ಕೋರ್ಟ್‌ನಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರೂ ಇದೇ ರೀತಿಯ ಪ್ರೊ-ಬೋನೋ (ಉಚಿತ ಕಾನೂನು ನೆರವು) ಅಡಿಯಲ್ಲಿ ಉಚಿತ ಕಾನೂನು ನೀಡಬೇಕಿದೆ ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.