-->
PTCL Act: ಭೂ ಪರಿವರ್ತನೆ ಆಗಿರುವ ಜಮೀನಿನ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ- ಕರ್ನಾಟಕ ಹೈಕೋರ್ಟ್‌

PTCL Act: ಭೂ ಪರಿವರ್ತನೆ ಆಗಿರುವ ಜಮೀನಿನ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ- ಕರ್ನಾಟಕ ಹೈಕೋರ್ಟ್‌

PTCL Act: ಭೂ ಪರಿವರ್ತನೆ ಆಗಿರುವ ಜಮೀನಿನ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ- ಕರ್ನಾಟಕ ಹೈಕೋರ್ಟ್‌




ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾಗಿರುವ ಭೂಮಿ ಕೃಷಿಯೇತರ ಉದ್ದೇಶಗಳ ಬಳಕೆಗೆ ಪರಿವರ್ತನೆಯಾಗಿದ್ದರೆ ಆಗ ಮಂಜೂರಾದ ಭೂಮಿಯ ಸ್ವರೂಪ ಕಳೆದುಕೊಳ್ಳಲಿದೆ. ಅಂತಹ ಭೂಮಿಯ ಮಾರಾಟಕ್ಕೆ ಜಿಲ್ಲಾಧಿಕಾರಿ (ಸರ್ಕಾರ)ದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾ. ಅಲೋಕ್ ಅರಾಧೆ, ನ್ಯಾ. ಸಚಿನ್ ಶಂಕರ್ ಮಗದಂ ಮತ್ತು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ತ್ರಿ ಸದಸ್ಯ ನ್ಯಾಯಪೀಠ 5 ಜುಲೈ 2021ರಂದು ಈ ಮಹತ್ವದ ತೀರ್ಪು ನೀಡಿದೆ.


ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಮೀನುಕುಂಟೆ ಗ್ರಾಮದ ಮುನ್ನಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ತ್ರಿಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 95ರ ಅಡಿಯಲ್ಲಿ ಕೃಷಿಯೇತರ ಉದ್ದೇಶಕ್ಎಕ ಪರಿವರ್ತನೆ ಮಾಡಿದ್ದರೆ ಆಗ ಆ ಮಂಜೂರಾದ ಭೂಮಿ ಸ್ವರೂಪ ಕಳೆದುಕೊಳ್ಳಲಿದೆ. ಅಂತಹ ಸಂದರ್ಭದಲ್ಲಿ ಆ ಭೂಮಿಯನ್ನು ಮಾರಾಟ ಮಾಡಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿ ವರ್ಗಾವಣೆ ನಿಷೇಧ) ಕಾಯ್ದೆ 1978ರ ಸೆಕ್ಷನ್ 4(2) ಅನ್ವಯ ಜಿಲ್ಲಾಧಿಕಾರಿಯವರಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಮಂಜೂರಾದ ಭೂಮಿಗೆ ಮಾತ್ರ ಪೂರ್ವಾನುಮತಿ ಪಡೆಯಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


SC ST ಸಮುದಾಯಕ್ಕೆ ಮಂಜೂರಾದ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 95(2)ರಡಿ ಭೂ ಪರಿವರ್ತನೆ ಮಾಡಿದ್ದರೆ ಅದನ್ನು ಕೃಷಿಯೇತರ ಉದ್ದೇಸಕ್ಕೆ ಬಳಸಲು ಮುಂದಾಗಿದ್ದಾರೆ ಎಂದೇ ಅರ್ಥ. ಶಾಸನದ ಉದ್ದೇಶ ಮಂಜೂರಾದ ಭೂಮಿಗೆ ರಕ್ಷಣೆ ನೀಡುವುದಷ್ಟೇ. ಆದರೆ, ಮಂಜೂರಾದ ಭೂಮಿ ಪರಿವರ್ತನೆಯಾದಾಗ ಅದು ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತದೆ. ಇದರಿಂದ 1978ರ ಪಿಟಿಸಿಎಲ್ ಅಡಿ ಲಭ್ಯವಿರುವ ರಕ್ಷಣೆ ಮುಂದುವರಿಯುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.



ಪ್ರಕರಣ: ಮುನ್ನಯ್ಯ ಮತ್ತಿತರರು Vs ಡೆಪ್ಯೂಟಿ ಕಮಿಷನರ್, ಬೆಂಗಳೂರು ಮತ್ತಿತರರು

ಕರ್ನಾಟಕ ಹೈಕೋರ್ಟ್, WP 60483/2016

Ads on article

Advertise in articles 1

advertising articles 2

Advertise under the article