ಜಡ್ಜ್‌ಗಳ ಟ್ರೈನಿಂಗ್ ರೀತಿಯಲ್ಲಿ ವಕೀಲರಿಗೂ ತರಬೇತಿ: ಸುಪ್ರೀಂ ಕೋರ್ಟ್ ಇಂಗಿತ
Sunday, February 11, 2024
ಜಡ್ಜ್‌ಗಳ ಟ್ರೈನಿಂಗ್ ರೀತಿಯಲ್ಲಿ ವಕೀಲರಿಗೂ ತರಬೇತಿ: ಸುಪ್ರೀಂ ಕೋರ್ಟ್ ಇಂಗಿತ
ನ್ಯಾಯಾಧೀಶರು ತರಬೇತಿಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಗೆ ಹೋಗುವಂತೆ ವಕೀಲರೂ ಕೂಡ ಏಕೆ ತರಬೇತಿ ಪಡೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಹೇಳಿಕೆ ನೀಡಿದೆ
ಎಲ್ಲ ವಕೀಲರು ಕಡ್ಡಾಯವಾಗಿ ತರಬೇತಿಯನ್ನು ಪಡೆಯಬೇಕು ಮತ್ತು ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾನಿಲಯದಿಂದ ಪ್ರಮಾಣ ಪತ್ರವನ್ನು ಹೊಂದಿದ್ದರೆ ಮಾತ್ರ ಅಂಥವರಿಗೆ ವಕಾಲತ್ತು ನಡೆಸಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸವಿಕ್ ಭಟ್ಟಾಚಾರ್ಯ ಅವರ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.