-->
ವಕೀಲರಿಗೆ ಚಾಕುವಿನಿಂದ ಇರಿತ: ಆರೋಪಿಯನ್ನು ಬಂಧಿಸಿದ ಪೊಲೀಸರು

ವಕೀಲರಿಗೆ ಚಾಕುವಿನಿಂದ ಇರಿತ: ಆರೋಪಿಯನ್ನು ಬಂಧಿಸಿದ ಪೊಲೀಸರು

ವಕೀಲರಿಗೆ ಚಾಕುವಿನಿಂದ ಇರಿತ: ಆರೋಪಿಯನ್ನು ಬಂಧಿಸಿದ ಪೊಲೀಸರು





ಬೆಂಗಳೂರು ಹೊರವಲಯದಲ್ಲಿ ಇರುವ ಆನೇಕಲ್‌ನಲ್ಲಿ ವಕೀಲರೊಬ್ಬರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.


ಈ ಘಟನೆ ನಡೆದಿರುವುದು ಆನೇಕಲ್ ಪೊಲೀಸ್ ಠಾಣೆಯ ಸಮೀಪದಲ್ಲೇ. ವಕೀಲರಾದ ಮಂಜುನಾಥ್ ಎಂಬುವವರ ಮೇಲೆ ಈ ಅಮಾನುಷ ದಾಳಿ ನಡೆಸಲಾಗಿದ್ದು. ವಕೀಲರ ಬೆನ್ನು, ಕೈಗೆ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ.


ವಕೀಲರ ಮೇಲೆ ದಾಳಿ ನಡೆಸುತ್ತಿರುವುದನ್ನು ಗಮನಿಸಿದ ಆಟೋ ಡ್ರೈವರ್‌ವೊಬ್ಬರು ತಕ್ಷಣ ನೆರವಿಗೆ ದಾವಿಸಿದ್ದರು. ಅದನ್ನು ಕಂಡ ದುಷ್ಕರ್ಮಿ ಆ ಆಟೋ ಡ್ರೈವರ್ ಮೇಲೂ ಹಲ್ಲೆ ನಡೆಸಿದ್ದಾನೆ.


ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಕೀಲರಾದ ಮಂಜುನಾಥ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಘಟನೆ ಯಾವ ಕಾರಣಕ್ಕೆ ನಡೆಯಿತು ಎಂಬ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ಧಾರೆ.





Ads on article

Advertise in articles 1

advertising articles 2

Advertise under the article