ನ್ಯಾಯಾಂಗ ದುರ್ಬಲಗೊಳಿಸಲು 'ನಿರ್ದಿಷ್ಟ ಗುಂಪು' ಯತ್ನ: ಮುಖ್ಯ ನ್ಯಾಯಮೂರ್ತಿಗೆ 600ಕ್ಕೂ ಹೆಚ್ಚು ವಕೀಲರ ಪತ್ರ
ನ್ಯಾಯಾಂಗ ದುರ್ಬಲಗೊಳಿಸಲು 'ನಿರ್ದಿಷ್ಟ ಗುಂಪು' ಯತ್ನ: ಮುಖ್ಯ ನ್ಯಾಯಮೂರ್ತಿಗೆ 600ಕ್ಕೂ ಹೆಚ್ಚು ವಕೀಲರ ಪತ್ರ
ನ್ಯಾಯಾಂಗ ದುರ್ಬಲಗೊಳಿಸಲು 'ನಿರ್ದಿಷ್ಟ ಗುಂಪು' ಪ್ರಯತ್ನ ನಡೆಸುತ್ತಿದೆ ಎಂದು 600ಕ್ಕೂ ಹೆಚ್ಚು ವಕೀಲರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಆತಂಕ ತೋಡಿಕೊಂಡಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತ ಕೆಲವರು ಮತ್ತು ರಾಜಕೀಯ ವ್ಯಕ್ತಿಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರ ಮಾಡುತ್ತಿದ್ದಾರೆ. ಹಾಗೂ ಸೆಲೆಕ್ಟಿವ್ ಟೀಕೆಗಳ ಮೂಲಕ ನ್ಯಾಯಾಂಗದ ಸಮಗ್ರತೆಗೆ ಹಾನಿ ಉಂಟುಮಾಡುವ ಕೀಟಲೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕರ್ನಾಟಕದ ಹಿರಿಯ ವಕೀಲರಾದ ಉದಯ್ ಹೊಳ್ಳ, ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರಜಾಪ್ರಭುತ್ವದ ರಚನೆಗೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಇರುವ ನಂಬಿಕೆಗೆ ಈಗ ಗಂಭೀರ ಬೆದರಿಕೆ ಇದೆ. ಭ್ರಷ್ಟಾಚಾರ ಆರೋಪಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರ ಅನುಸರಿಸಲಾಗುತ್ತಿದೆ ಎಂದು ವಕೀಲರು ತಮ್ಮ ಪತ್ರದಲ್ಲಿ ಆತಂಕ ತೋಡಿಕೊಂಡಿದ್ದಾರೆ.