-->
ಆರೋಪ ಪಟ್ಟಿ ಒಂದು ಮಹತ್ವದ ದಾಖಲೆ, ಅದರಲ್ಲಿ ಪ್ರಕರಣದ ಎಲ್ಲ ವಿವರ ಇರಲೇಬೇಕು: ಪೊಲೀಸರಿಗೆ ಸುಪ್ರೀಂ ಕೋರ್ಟ್‌ ತಾಕೀತು

ಆರೋಪ ಪಟ್ಟಿ ಒಂದು ಮಹತ್ವದ ದಾಖಲೆ, ಅದರಲ್ಲಿ ಪ್ರಕರಣದ ಎಲ್ಲ ವಿವರ ಇರಲೇಬೇಕು: ಪೊಲೀಸರಿಗೆ ಸುಪ್ರೀಂ ಕೋರ್ಟ್‌ ತಾಕೀತು

ಆರೋಪ ಪಟ್ಟಿ ಒಂದು ಮಹತ್ವದ ದಾಖಲೆ, ಅದರಲ್ಲಿ ಪ್ರಕರಣದ ಎಲ್ಲ ವಿವರ ಇರಲೇಬೇಕು: ಪೊಲೀಸರಿಗೆ ಸುಪ್ರೀಂ ಕೋರ್ಟ್‌ ತಾಕೀತು





ಪೊಲೀಸ್ ಅಧಿಕಾರಿಗಳು ಅಥವಾ ತನಿಖಾಧಿಕಾರಿಗಳು ಸಲ್ಲಿಸುವ ಅಂತಿಮ ವರದಿ ಅಥವಾ ಆರೋಪಪಟ್ಟಿ (ಚಾರ್ಜ್‌ಶೀಟ್‌)ನಲ್ಲಿ ಸಿಆರ್‌ಪಿಸಿಯ ಸೆಕ್ಷನ್ 173(2)ರಲ್ಲಿ ತಿಳಿಸಿರುವಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ವಿವರಗಳು ಇರಲೇಬೇಕು ಎಂದು ಸುಪ್ರೀಂ ಕೋರ್ಟ್ ಪೊಲೀಸ್ ಇಲಾಖೆಗೆ ತಾಕೀತು ಮಾಡಿದೆ.


ನ್ಯಾ. ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ಮಾಡಿದೆ.


ತನಿಖಾಧಿಕಾರಿಗಳು ಬಹುತೇಕ ಸಂದರ್ಭಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 173(2)ರ ಅಡಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಆರೋಪ ಪಟ್ಟಿಯಲ್ಲಲಿ ಉಲ್ಲೇಖಿಸುವುದಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿದ್ದು, ಈ ತೀರ್ಪು ಮೂಲಕ ದೇಶದ ಎಲ್ಲ ಪೊಲೀಸ್ ಇಲಾಖೆಗೆ ಮಾರ್ಗಸೂಚಿ ನೀಡಿ ನಿರ್ದೇಶನ ನೀಡಿತು.



ಸಿಆರ್‌ಪಿಸಿಯ ಸೆಕ್ಷನ್ 173(2)ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್‌ಶೀಟ್ ಒಂದು ಅಗತ್ಯ ಹಾಗೂ ಮಹತ್ವದ ದಾಖಲೆಯಾಗಿದೆ. ಇದು ಪ್ರಾಸಿಕ್ಯೂಶನ್, ಪ್ರತಿವಾದಿ ಮತ್ತು ನ್ಯಾಯಾಲಯದ ದೃಷ್ಟಿಯಿಂದ ಅಪಾರ ಮಹತ್ವ ಹೊಂದಿದೆ ಎಂದು ನ್ಯಾಯಪೀಠ ನೆನಪಿಸಿತು.


ಕೊಲೆ ಪ್ರಕರಣವೊಂದರಲ್ಲಿ ಒಬ್ಬ ವ್ಯಕ್ತಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿತು.


Ads on article

Advertise in articles 1

advertising articles 2

Advertise under the article