ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ "ಕಂಪೆನಿ" ಕೂಡ ದೂರು ದಾಖಲಿಸಬಹುದು: ಸುಪ್ರೀಂ ಕೋರ್ಟ್
ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ "ಕಂಪೆನಿ" ಕೂಡ ದೂರು ದಾಖಲಿಸಬಹುದು: ಸುಪ್ರೀಂ ಕೋರ್ಟ್
"ಕಂಪೆನಿ" ಕೂಡ "ವ್ಯಕ್ತಿ" ವ್ಯಾಖ್ಯಾನದೊಳಗೆ ಬರುತ್ತದೆ. ಹಾಗಾಗಿ, ಕಂಪೆನಿ ಕೂಡ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಗ್ರಾಹಕರ ವಿವಾದಗಳ ಪರಿಹಾರ ಆಯೋಗದ ಮುಂದೆ ದೂರು ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರಲ್ಲಿ ಕಾರ್ಪೊರೇಟ್ ಸಂಸ್ಥೆಯನ್ನು 'ವ್ಯಕ್ತಿ' ಎಂಬ ವ್ಯಾಖ್ಯಾನದೊಳಗೆ ತರಲಾಗಿದೆ. ಈ ಹಿಂದಿನ 1986ರ ಕಾಯ್ದೆಯಲ್ಲಿ ಅದು ಒಳಗೊಂಡಿರಲಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಶಾಸಕಾಂಗವು ಈ ವಿಶಾಲವಾದ ವ್ಯಾಪ್ತಿಯಲ್ಲಿ ವ್ಯಕ್ತಿ ಎಂಬ ಪದವನ್ನು ಹಿಗ್ಗಿಸಿದೆ. ಹಾಗಾಗಿ, ಕಾರ್ಪೊರೇಟ್ ಸಂಸ್ಥೆಗಳೂ ವ್ಯಕ್ತಿ ಎಂಬ ಪದದೊಳಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ವಾದವನ್ನು ತಿರಸ್ಕರಿಸಿತು.
ಪ್ರಕರಣ: ಕೋಝಿಫ್ಲೆಕ್ಸ್ ಮ್ಯಾಟ್ರೆಸಸ್ ಪ್ರೈವೇಟ್ ಲಿಮಿಟೆಡ್ Vs ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
ಸುಪ್ರೀಂ ಕೋರ್ಟ್, Civil Appeal 7966/2022 Dated 20-03-2024