ನ್ಯಾಯಾಂಗ, ಪಂಚಾಯತ್ ಹಾಗೂ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ
Tuesday, March 12, 2024
ನ್ಯಾಯಾಂಗ, ಪಂಚಾಯತ್ ಹಾಗೂ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ
ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಜನವರಿ 1ರಿಂದ ಪೂರ್ವಾನ್ವಯ ಆಗುವಂತೆ ಶೇ 3.7ರಷ್ಟು ಹೆಚ್ಚಳ ಮಾಡಿ ಹಣಕಾಸು ಇಲಾಖೆ ಆದೇಶ ನೀಡಿದೆ.
ಮೂಲ ವೇತನದ ಶೇ. 38.75ರಷ್ಟು ಇದ್ದ ತುಟ್ಟಿಭತ್ಯೆಯನ್ನು ಶೇ. 42.5ಕ್ಕೆ ಹೆಚ್ಚಳ ಮಾಡಲಾಗಿದೆ.
ನಿವೃತ್ತ ನೌಕರರು, ಕುಟುಂಬ ಪಿಂಚಣಿ ಪಡೆಯುತ್ತಿರುವವರೂ ಈ ಆದೇಶದ ಲಾಭ ಪಡೆಯಲಿದ್ದಾರೆ.
ಜಿಲ್ಲಾ ಪಂಚಾಯತ್ ನೌಕರರು, ನ್ಯಾಯಾಂಗ ಅಧಿಕಾರಿಗಳೂ ಈ ಆದೇಶದಿಂದ ಪ್ರಯೋಜನ ಪಡೆಯಲಿದ್ದಾರೆ.
ತುಟ್ಟಿ ಭತ್ಯೆಯ ಬಾಕಿ ಮೊತ್ತವನ್ನು ಮಾರ್ಚ್ ವೇತನದ ಬಟವಾಡೆ ನಂತರವೇ ನೀಡಲಾಗುವುದು. ಈ ತುಟ್ಟಿಭತ್ಯೆ ಏರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1792.91 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.