ಅನ್ಯ ರಾಜ್ಯ ವಕೀಲರು ಮಹಾರಾಷ್ಟ್ರದಲ್ಲಿ ನೋಂದಣಿಯಾದ ವಕೀಲರ ಸಹಿ ಇಲ್ಲದೆ ವಕಾಲತ್ತು ಹಾಕುವಂತಿಲ್ಲ: ಬಾಂಬೆ ಹೈಕೋರ್ಟ್
ಅನ್ಯ ರಾಜ್ಯ ವಕೀಲರು ಮಹಾರಾಷ್ಟ್ರದಲ್ಲಿ ನೋಂದಣಿಯಾದ ವಕೀಲರ ಸಹಿ ಇಲ್ಲದೆ ವಕಾಲತ್ತು ಹಾಕುವಂತಿಲ್ಲ: ಬಾಂಬೆ ಹೈಕೋರ್ಟ್
ಇತರ ರಾಜ್ಯಗಳಲ್ಲಿ ನೋಂದಣಿಯಾಧ ವಕೀಲರು ಮಹಾರಾಷ್ಟ್ರದಲ್ಲಿ ನೋಂದಣಿಯಾದ ವಕೀಲರ ಸಹಿ ಇಲ್ಲದೆ ಮಹಾರಾಷ್ಟ್ರ ರಾಜ್ಯದಲ್ಲಿ ವಕಾಲತ್ತು ಹಾಕುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಂಬೈ ಹೈಕೋರ್ಟ್‌ನ ಪೃಥ್ವಿರಾಜ್ ಕೆ. ಚವಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ 13-03-2024ರಂದು ಈ ತೀರ್ಪು ಹೊರಡಿಸಿದೆ.
Advocate Enrolled in Other State Cannot Appear in Court Without Filing Vakalatnama of Maharashtra State Enrolled Lawyer Along with Him: Bombay HC
ಮಹಾರಾಷ್ಟ್ರ ಅಥವಾ ಗೋವಾ ರಾಜ್ಯದಲ್ಲಿ ನೋಂದಣಿಯಾದ ವಕೀಲರ ಸಹಿ ಇಲ್ಲದ ಕಾರಣ ವಕಾಲತು ಹಾಕಿ ಪ್ರಕರಣವನ್ನು ಪ್ರತಿನಿಧಿಸಿದ ವಕೀಲರ ದುರ್ನಡತೆ ಎಂದು ನ್ಯಾಯಪೀಠ ಪರಿಗಣಿಸಿತು. ಅಲ್ಲದೆ, ರಾಜ್ಯ ವಕೀಲರ ಸಂಘಕ್ಕೆ ಸದ್ರಿ ವಕೀಲರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿತು.
ವಕಾಲತುನಾಮದಲ್ಲಿ ಸಹವರ್ತಿ ವಕೀಲರ ಸಹಿ ಇಲ್ಲದೆ ಕೇವಲ ಹೆಸರನ್ನು ನಮೂದಿಸಲಾಗಿತ್ತು. ಆದರೆ, ಸಹಿ ಇರಲಿಲ್ಲ. ಪ್ರಕರಣವನ್ನು ಪ್ರತಿನಿಧಿಸಿದ ಅವನೇಂದ್ರ ಕುಮಾರ್ ತಾವು ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದ ಸದಸ್ಯರಲ್ಲ. ಆದರೆ, ಉತ್ತರ ಪ್ರದೇಶ ವಕೀಲರ ಪರಿಷತ್ತಿನಲ್ಲಿನ ಸದಸ್ಯತ್ವ ವರ್ಗಾವಣೆಗೆ ಪತ್ರ ಬರೆದಿರುವುದಾಗಿ ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.
ಆದರೆ, ತಮ್ಮ ವಾದವನ್ನು ಸಮರ್ಥಿಸುವ ಯಾವುದೇ ದಾಖಲೆಯನ್ನು ಹಾಜರುಪಡಿಸಲಿಲ್ಲ. ಹಾಗೂ ಅವಧಿಮೀರಿದ ತಮ್ಮ ಉತ್ತರಪ್ರದೇಶ ವಕೀಲರ ಪರಿಷತ್ತಿನ ಗುರುತಿನ ಚೀಟಿಯನ್ನು ಪ್ರದರ್ಶಿಸಿದರು. ಆ ಗುರುತಿನ ಚೀಟಿಯ ಅವಧಿ 31-12-2022ಆಗಿತ್ತು.
ನಿಯಮಗಳ ಪ್ರಕಾರ, ಮಹಾರಾಷ್ಟ್ರ ವಕೀಲರ ಪರಿಷತ್ತಿನಲ್ಲಿ ನೋಂದಣಿಯಾಗದ ವಕೀಲರು ಕೋರ್ಟ್‌ನಲ್ಲಿ ಹಾಜರಾಗುವಂತಿಲ್ಲ. ಒಂದು ವೇಳೆ, ಸಹವರ್ತಿ ವಕೀಲರ ಸಹಿ ಜೊತೆಗೆ ವಕಾಲತ್ತು ಹಾಕಿದರೆ ವಾದ ಮಂಡಿಸಬಹುದು ಎಂದು ಸರ್ಕಾರಿ ಅಭಿಯೋಜಕರು ಈ ಸಂದರ್ಭದಲ್ಲಿ ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಸದ್ರಿ ವಕೀಲರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ವಕೀಲರ ಪರಿಷತ್ತಿನ ನಿರ್ದೇಶಿಸಿದರು.
ಪ್ರಕರಣ: ಮೊಯಿನೊದ್ದೀನ್ ಗೋಲ್ಡರ್ Vs ಮಹಾರಾಷ್ಟ್ರ ಸರ್ಕಾರ
ಬಾಂಬೆ ಹೈಕೋರ್ಟ್, Cr.Bail.Appl. 2632/2022 Dated 15-03-2024