ಬೆಳಗಾವಿ ಜಿಲ್ಲಾ ನ್ಯಾಯಾಲಯಗಳಲ್ಲಿ ಸ್ಟೆನೋ, ಟೈಪಿಸ್ಟ್, ಜವಾನ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ ಜಿಲ್ಲಾ ನ್ಯಾಯಾಲಯಗಳಲ್ಲಿ ಸ್ಟೆನೋ, ಟೈಪಿಸ್ಟ್, ಜವಾನ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ ಜಿಲ್ಲಾ ನ್ಯಾಯಾಲಯಗಳಲ್ಲಿ ಸ್ಟೆನೋ, ಟೈಪಿಸ್ಟ್, ಜವಾನ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಶೀಘ್ರ ಲಿಪಿಗಾರರು (ಸ್ಟೆನೋಗ್ರಾಫರ್ ಗ್ರೇಡ್ III)
ಬೆರಳಚ್ಚುಗಾರರು (ಟೈಪಿಸ್ಟ್)
ಆದೇಶ ಜಾರಿಕಾರರು (ಪ್ರೋಸೆಸ್ ಸರ್ವರ್)
ಸಿಪಾಯಿ/ಜವಾನ (ಪಿಯೋನ್)
ಖಾಲಿ ಇರುವ ಹುದ್ದೆಗಳು
1) ಶೀಘ್ರ ಲಿಪಿಗಾರರು (ಸ್ಟೆನೋಗ್ರಾಫರ್ ಗ್ರೇಡ್ III)
ಒಟ್ಟು ಹುದ್ದೆಗಳು - 5 ಹುದ್ದೆಗಳು
ವೇತನ ಶ್ರೇಣಿ: 27650-650-29600-750-32600-850-36000- 950-39800-1100-46400-1250-52650
2) ಬೆರಳಚ್ಚುಗಾರರು (ಟೈಪಿಸ್ಟ್)
ಒಟ್ಟು ಹುದ್ದೆಗಳು - 1 ಹುದ್ದೆ
ವೇತನ ಶ್ರೇಣಿ: 21400-500-22400-550-24600-600-27000-650-29600- 750-32600-850-36000-950-39800-1100-42000 ಹಾಗೂ ಲಭ್ಯವಿರುವ ಇತರೇಭತ್ಯೆಗಳು
3) ಆದೇಶ ಜಾರಿಕಾರರು (ಪ್ರೋಸೆಸ್ ಸರ್ವರ್)
ಒಟ್ಟು ಹುದ್ದೆಗಳು-02 ಹುದ್ದೆಗಳು
ವೇತನ ಶ್ರೇಣಿ: 19950-450-20400-500-22400-550-24600-600- 27000-650-29600 -750-32600-850- 36000-950- 37900 ಹಾಗೂ ಲಭ್ಯವಿರುವ ಇತರೇ ಭತ್ಯೆಗಳು
4) ಸಿಪಾಯಿ/ಜವಾನ (ಪಿಯೋನ್) -
ಒಟ್ಟು ಹುದ್ದೆಗಳು-33 ಹುದ್ದೆಗಳು
ವೇತನ ಶ್ರೇಣಿ: 17000-400-18600-450-20400-500-22400-550- 24600-600-27000-650-28950 ಹಾಗೂ ಲಭ್ಯವಿರುವ ಇತರೇ ಭತ್ಯೆಗಳು
ಆನ್‌ಲೈನ್ ಮೂಲಕ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಲಿಂಕ್‌ನ್ನು ಈ ಕೆಳಗೆ ನೀಡಲಾಗಿದೆ.
(https://belagavi.dcourts.gov.in/notice-category/recruitments)
ಅರ್ಜಿ ಸಲ್ಲಿಸಲು ಆರಂಭದ ದಿನ 14-03-2024
ಅರ್ಜಿ ಸಲ್ಲಿಸಲು ಕೊನೆಯ ದಿನ 14-04-2024
ಅಂಚೆ ಅಥವಾ ಇತರ ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ತಾಂತ್ರಿಕ ತೊಂದರೆ ಬಂದರೆ ಈ ಇಮೇಲ್ ವಿಳಾಸಕ್ಕೆ ದೂರುಗಳನ್ನು ಸಲ್ಲಿಸಬಹುದು. recruitment.pdjbgm@gmail.com