-->
ವಯೋವೃದ್ಧ ಮಾವನ ಮೇಲೆ ಸೊಸೆಯ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ, ಉಚಿತ ಕಾನೂನು ನೆರವು ಘೋಷಿಸಿದ ವಿಧಿಪ್ರಜ್ಞಾ ಕರ್ನಾಟಕ

ವಯೋವೃದ್ಧ ಮಾವನ ಮೇಲೆ ಸೊಸೆಯ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ, ಉಚಿತ ಕಾನೂನು ನೆರವು ಘೋಷಿಸಿದ ವಿಧಿಪ್ರಜ್ಞಾ ಕರ್ನಾಟಕ

ವಯೋವೃದ್ಧ ಮಾವನ ಮೇಲೆ ಸೊಸೆಯ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ, ಉಚಿತ ಕಾನೂನು ನೆರವು ಘೋಷಿಸಿದ ವಿಧಿಪ್ರಜ್ಞಾ ಕರ್ನಾಟಕ





ಮಂಗಳೂರಿನ ಅತ್ತಾವರದಲ್ಲಿ ಕರ್ನಾಟಕ ವಿದ್ಯುತ್ ನಿಗಮ(KEB)ದಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿ ತನ್ನ ವಯೋವೃದ್ಧ ಮಾವ ಪದ್ಮನಾಭ ಸುವರ್ಣ ಅವರಿಗೆ ಅಮಾನವೀಯವಾಗಿ ಥಳಿಸಿ ಹಲ್ಲೆ ನಡೆಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.



ಇ-ಮುಂಗಾರು ಸುದ್ದಿ ಜಾಲ ಈ ಘಟನೆಯನ್ನು ಸಿಸಿಟಿವಿ ದೃಶ್ಯಾವಳಿ ಸಹಿತ ಸುದ್ದಿ ಮಾಡಿದ್ದು, ಈ ಸುದ್ದಿಯನ್ನು ವೀಕ್ಷಿಸಿದ ನಾಗರಿಕರು ರಾಜ್ಯದ ವಿವಿಧೆಡೆಯಿಂದ ತಮ್ಮ ನೋವು, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



ಇದೊಂದು ಪಾಶವಿಕ ಕೃತ್ಯವಾಗಿದ್ದು, ಮಹಿಳೆ ಸರ್ಕಾರದ ಹಿರಿಯ ಅಧಿಕಾರಿಯಾಗಿರುವುದು ನಿಜಕ್ಕೂ ದುರ್ದೈವ ಎಂದು ಕೆಲವರು ಬಣ್ಣಿಸಿದ್ದಾರೆ.



ಈ ಘಟನೆಯನ್ನು ಬೆಂಗಳೂರಿನ ಪ್ರತಿಷ್ಠಿತ "ವಿಧಿ ಪ್ರಜ್ಞ ಕರ್ನಾಟಕ (ರಿ)" ಕಾನೂನು ಸ್ವಯಂ ಸೇವಾ ಸಂಸ್ಥೆ ತೀವ್ರವಾಗಿ ಖಂಡಿಸಿದೆ. ಹಿರಿಯ ನಾಗರಿಕ ಮೇಲೆ ನಡೆಯುತ್ತಿರುವ ದೌರ್ಜನ್ಯ ಯಾವುದೇ ಪ್ರಕಾರದ್ದಾಗಿದ್ದರೂ ಅದು ಒಪ್ಪತಕ್ಕದ್ದಲ್ಲ ಎಂದು ಹೇಳಿರುವ ಸಂಸ್ಥೆ, ಹಿರಿಯ ನಾಗರಿಕರಾದ 87 ವರ್ಷದ ಪದ್ಮನಾಭ ಸುವರ್ಣ ಅವರಿಗೆ ಉಚಿತವಾಗಿ ಕಾನೂನು ನೆರವು ನೀಡಲು ಮುಂದಾಗಿದೆ.



ಅವರಿಗೆ ಎಲ್ಲ ರೀತಿಯ ಅಗತ್ಯ ಕಾನೂನು ನೆರವು ನೀಡಲು ಸಂಸ್ಥೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಮಾನವೀಯ ಹೃದಯಗಳು ಸಂತ್ರಸ್ತರ ನೆರವಿಗೆ ಧಾವಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ವಕೀಲರೂ ಆಗಿರುವ ಜೆ. ಪುರುಷೋತ್ತಮ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.



ಹೆಚ್ಚಿನ ಮಾಹಿತಿಗೆ ಹಾಗೂ ಹಿರಿಯ ನಾಗರಿಕರ ಕಾನೂನು ನೆರವಿಗೆ 9980051064ಕ್ಕೆ ಸಂಪರ್ಕಿಸಲು ವಿಧಿಪ್ರಜ್ಞಾ ಕರ್ನಾಟಕ ಸಂಸ್ಥೆ ಕೋರಿದೆ.



ಈ ಮಧ್ಯೆ, ಸೊಸೆಯಿಂದ ಹೀನಾಯವಾಗಿ ಥಳಿಸಿಕೊಂಡಿರುವ ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.



ವಿದೇಶದಲ್ಲಿ ಇರುವ ಹಿರಿಯ ನಾಗರಿಕರ ಪುತ್ರ ಪ್ರೀತಮ್ ಸುವರ್ಣ ಅವರು ತನ್ನ ಪತ್ನಿಯ ವಿರುದ್ಧವೇ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಇಬಿ ಅಧಿಕಾರಿ ಉಮಾಶಂಕರಿ ವಿರುದ್ಧ ಕೊಲೆಯತ್ನದ ಆರೋಪದ ಮೇಲೆ ದೂರು ದಾಖಲಾಗಿದೆ.


Ads on article

Advertise in articles 1

advertising articles 2

Advertise under the article