ಉ.ಪ್ರದೇಶದ ಮದರಸಾ ಕಾಯ್ದೆ "ಅಸಂವಿಧಾನಿಕ": ಮಕ್ಕಳನ್ನು ರೆಗ್ಯುಲರ್ ಶಾಲೆಗೆ ಸೇರಿಸಲು ಕ್ರಮ- ಅಲಹಾಬಾದ್ ಹೈಕೋರ್ಟ್
ಉ.ಪ್ರದೇಶದ ಮದರಸಾ ಕಾಯ್ದೆ "ಅಸಂವಿಧಾನಿಕ": ಮಕ್ಕಳನ್ನು ರೆಗ್ಯುಲರ್ ಶಾಲೆಗೆ ಸೇರಿಸಲು ಕ್ರಮ- ಅಲಹಾಬಾದ್ ಹೈಕೋರ್ಟ್
ಉತ್ತರ ಪ್ರದೇಶದ ಬಹುಚರ್ಚಿತ ಮದರಸಾ ಕಾಯ್ದೆಯನ್ನು "ಅಸಂವಿಧಾನಿಕ" ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂವಿಧಾನದ ಜಾತ್ಯತೀತ ತತ್ವಗಳ ಆಧಾರದಲ್ಲಿ ಹಾಗೂ ಸಂವಿಧಾನದ ಆರ್ಟಿಕಲ್ 14ರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಆಧಾರದಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದ್ದು, ಮಕ್ಕಳನ್ನು ರೆಗ್ಯುಲರ್ ಶಾಲೆಗಳಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾ. ವಿವೇಕ್ ಚೌಧರಿ ಮತ್ತು ನ್ಯಾ. ಸುಭಾಶ್ ವಿದ್ಯಾರ್ಥಿ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಪ್ರಾಥಮಿಕ ಶಿಕ್ಷಣ ಮಂಡಳಿಯ ಪಠ್ಯಕ್ರಮದಲ್ಲಿ ನಡೆಯುವ ಪ್ರಾಥಮಿಕ ಶಾಲೆಗಳಲ್ಲಿ ಮದರಸಾದಲ್ಲಿ ಕಲಿಯುವ ಮಕ್ಕಳನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಉತ್ತರ ಪ್ರದೇಶದಲ್ಲಿ 16513 ನೋಂದಾಯಿತ ಹಾಗೂ 8449 ನೋಂದಯಿಸಲ್ಪಡ ಮದರಸಾಗಳಿವೆ. ಈ ಮದರಸಾಗಳಲ್ಲಿ ಸುಮಾರು 25 ಸಾವಿರ ಮಕ್ಕಳು ಮದರಸಾ ಶಿಕ್ಷಣ ಪಡೆಯುತ್ತಿದ್ದರು.