"ಒಂದು ರಾಷ್ಟ್ರ-ಒಂದು ಚುನಾವಣೆ": ರಾಮನಾಥ್ ಕೋವಿಂದ್ ಸಮಿತಿ ಗ್ರೀನ್ ಸಿಗ್ನಲ್
"ಒಂದು ರಾಷ್ಟ್ರ-ಒಂದು ಚುನಾವಣೆ": ರಾಮನಾಥ್ ಕೋವಿಂದ್ ಸಮಿತಿ ಗ್ರೀನ್ ಸಿಗ್ನಲ್
ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸುವ "ಒಂದು ರಾಷ್ಟ್ರ-ಒಂದು ಚುನಾವಣೆ" ಪರಿಕಲ್ಪನೆಗೆ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿದ್ದ ಸಮಿತಿ ಹಸಿರು ನಿಶಾನೆ ತೋರಿದೆ.
ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅಪಾರ ಬೆಂಬಲ ಇದೆ ಎಂದು ಸಮಿತಿ ಹೇಳಿಕೊಂಡಿದೆ. ಈ ಪರಿಕಲ್ಪನೆಯಿಂದಾಗಿ ಅಭಿವೃದ್ದಿಗೆ ನೆರವು ನೀಡಿದಂತಾಗುತ್ತದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಸಮಿತಿಯ ಶಿಫಾರಸ್ಸುಗಳೇನು..?
ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು.
ಎರಡನೇ ಹಂತದಲ್ಲಿ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದ 100 ದಿನಗಳಲ್ಲಿ ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ (ಸ್ಥಳೀಯ ಸಂಸ್ಥೆಗಳು) ಚುನಾವಣೆ ನಡೆಸಬೇಕು ಎಂದು ಈ ಸಮಿತಿ ಶಿಫಾರಸ್ಸು ಮಾಡಿದೆ.
ಸಮಿತಿಯಲ್ಲಿ ಇದ್ದ ಪ್ರಮುಖ ಸದಸ್ಯರು
ರಾಮನಾಥ್ ಕೋವಿಂದ್
ಗೃಹ ಸಚಿವ ಅಮಿತ್ ಶಾ
ಹಿರಿಯ ವಕೀಲ ಹರೀಶ್ ಸಾಳ್ವೆ
ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್
ಪ್ರತಿಪಕ್ಷ ನಾಯಕ ಅಧೀರ್ ರಂಜ್ ಚೌಧರಿ
15 ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್
ನಿವೃತ್ತ ಮುಖ್ಯ ವಿಚಕ್ಷಣಾ ಅಧಿಕಾರಿ ಸಂಜಯ್ ಕೊಠಾರಿ
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (ವಿಶೇಷ ಆಹ್ವಾನಿತರು)