ಸ್ಟೇಟ್‌ಬ್ಯಾಂಕ್‌ಗೆ ಮತ್ತಷ್ಟು ಆತಂಕ: ಸುಳ್ಳು ಸಾಕ್ಷಿ(Perjury) ದಾವೆಗೆ ಮುಂದಾದ ಸಿಪಿಎಂ: ಸುಪ್ರೀಂ ಅಂಗಣದಲ್ಲಿ ಸ್ಟೇಟ್ ಬ್ಯಾಂಕ್ ಮೇಲೆ ಮತ್ತೊಂದು ಕೇಸ್?
Tuesday, March 19, 2024
ಸ್ಟೇಟ್‌ಬ್ಯಾಂಕ್‌ಗೆ ಮತ್ತಷ್ಟು ಆತಂಕ: ಸುಳ್ಳು ಸಾಕ್ಷಿ(Perjury) ದಾವೆಗೆ ಮುಂದಾದ ಸಿಪಿಎಂ: ಸುಪ್ರೀಂ ಅಂಗಣದಲ್ಲಿ ಸ್ಟೇಟ್ ಬ್ಯಾಂಕ್ ಮೇಲೆ ಮತ್ತೊಂದು ಕೇಸ್?
ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ಸಾಕ್ಷಿ (Perjury) ನುಡಿದ ಆರೋಪದಲ್ಲಿ ಅದರ ವಿರುದ್ಧ ದಾವೆಯನ್ನು ಹೂಡಲು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಚಿಂತನೆ ನಡೆಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚುನಾವಣಾ ಬಾಂಡ್ ವಿಚಾರದಲ್ಲಿ ಭಾರತೀಯ ಸ್ಟೇಟ್‌ಬ್ಯಾಂಕ್ ಸುಳ್ಳು ಮಾಹಿತಿ ನೀಡಿದೆ. ಅದು ಉದ್ದೇಶಪೂರ್ವಕವಾಗಿ ಹಾಗೆ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ದೇಶದ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಅದು ಮಾಡಿದೆ. ಇದು ಗಂಭೀರವಾದ ಮತ್ತು ಅಷ್ಟೇ ಆತಂಕಕಾರಿ ವಿಚಾರವಾಗಿದೆ ಎಂದು ಸೀತಾರಾಮ ಯೆಚೂರಿ ಅಭಿಪ್ರಾಯಪಟ್ಟರು.