-->
ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘ ಕಾಲ ಇಡುವುದು ವ್ಯರ್ಥ: ಹೈಕೋರ್ಟ್‌

ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘ ಕಾಲ ಇಡುವುದು ವ್ಯರ್ಥ: ಹೈಕೋರ್ಟ್‌

ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘ ಕಾಲ ಇಡುವುದು ವ್ಯರ್ಥ: ಹೈಕೋರ್ಟ್‌





ವಿವಿಧ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘ ಕಾಲ ಇಡುವುದು ವ್ಯರ್ಥ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ ಹೇಳಿದೆ.


ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಕುರಿತು ನಿರ್ಧರಿಸುವ ಅಧಿಕಾರ ಹೊಂದಿರುವ ನ್ಯಾಯಾಲಯಗಳು ಅಗತ್ಯ ಬಾಂಡ್ ಮತ್ತು ಭದ್ರತೆ ಪಡೆದು ಅದರ ಬಿಡುಗಡೆಗೆ ತಕ್ಷಣ ಆದೇಶ ಹೊರಡಿಸಬೇಕು ಎಂದು ನ್ಯಾ. ವಾಸಿಮ್ ಸಾದಿಕ್ ನರ್ಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ವಾಸ್ತವಾಂಶ, ಪರಿಸ್ಥಿತಿ ಯಾವುದೇ ಇದ್ದರೂ, ವಾಹನಗಳನ್ನು ಪೊಲೀಸ್ ಠಾಣೆಗಳಲ್ಲಿ ದೀರ್ಘ ಕಾಲದ ವರೆಗೆ ಇಡುವುದು ಸರಿಯಲ್ಲ. ಅದೊಂದು ವ್ಯರ್ಥ ಕಸರತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಸಿಆರ್‌ಪಿಸಿ ಸೆಕ್ಷನ್ 452ರ ಅಡಿಯಲ್ಲಿ ನ್ಯಾಯಾಲಯ ಯಾವುದೇ ಆಸ್ತಿಯ ಮಾಲೀಕತ್ವ ಅಥವಾ ಅದನ್ನು ನಿರ್ವಹಿಸುವ ಯಾವುದೇ ಹಕ್ಕನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೂ ಸ್ವಾಧೀನದ ಆಧಾರದ ಮೇಲೆ ಆಸ್ತಿಯನ್ನು ವಿಲೇವಾರಿ ಮಾಡಬಹುದು ಎಂದು ನ್ಯಾಯಪೀಠ ಹೇಳಿದರು.



ಪ್ರಕರಣ: ಖದೀರ್ ಹುಸೇನ್ Vs ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ

(ಜಮ್ಮು ಕಾಶ್ಮೀರ ಹೈಕೋರ್ಟ್, WP (Crl) No. 1/2024 Dated 23-02-2024



Ads on article

Advertise in articles 1

advertising articles 2

Advertise under the article