ದೇಹದ ಗೌಪ್ಯ ಜಾಗದಲ್ಲಿ ಚರ್ಮರೋಗ: ಬಿಚ್ಚಿಟ್ಟಿತು ಅಸಲಿ ವಿಷಯ- ಪೋಕ್ಸೋ ಕಾಯ್ದೆಯಡಿ ಸ್ವಾಮೀಜಿ ಬಂಧನ
ದೇಹದ ಗೌಪ್ಯ ಜಾಗದಲ್ಲಿ ಚರ್ಮರೋಗ: ಬಿಚ್ಚಿಟ್ಟಿತು ಅಸಲಿ ವಿಷಯ- ಪೋಕ್ಸೋ ಕಾಯ್ದೆಯಡಿ ಸ್ವಾಮೀಜಿ ಬಂಧನ
ದೇಹದ ಗೌಪ್ಯ ಜಾಗದಲ್ಲಿ ಚರ್ಮರೋಗ ಇದೆ ಎಂಬ ವಿಷಯ ಮಠದಲ್ಲಿ ನಡೆಯುತ್ತಿದ್ದ ಅಸಲಿ ವಿಷಯವನ್ನೇ ಬಿಚ್ಚಿಟ್ಟಿದೆ.
ಪೊಲೀಸ್ ತನಿಖೆಯಿಂದ ಪೋಕ್ಸೋ ಕಾಯ್ದೆಯಡಿ ಮಠದ ಸ್ವಾಮೀಜಿಯೇ ಬಂಧನಕ್ಕೊಳಗಾದ ಘಟನೆ ತುಮಕೂರಿನ ಕುಣಿಗಲ್‌ನಲ್ಲಿ ನಡೆದಿದೆ.
ಇಲ್ಲಿನ ಹಂಗರನಹಳ್ಳಿಯ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ ಬಂಧನಕ್ಕೊಳಗಾದ ಆರೋಪಿ.
ಬಾಲ ಮಂಜುನಾಥ ಸ್ವಾಮೀಜಿ ಅವರನ್ನು ಪೊಲೀಸರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿಸಿದ್ದಾರೆ.
ಘಟನೆ ಬಯಲಾಗಿದ್ದು ಹೇಗೆ..?
ಸ್ವಾಮೀಜಿಯ ಗೌಪ್ಯ ಜಾಗದಲ್ಲಿ ಚರ್ಮರೋಗ ಇದೆ. ಅದಕ್ಕೆ ಚಿಕಿತ್ಸೆ ಕೊಡಿಸಲು ವೈದ್ಯರು ಎನ್ನಲಾದ ಮಹಿಳೆಯೊಬ್ಬರೊಂದಿಗೆ ವೀಡಿಯೋ ಕಾಲ್ ಮೂಲಕ ಮಾತುಕತೆಗೆ ಸ್ವಾಮೀಜಿ ಸಹಾಯಕ ಅಭಿಪೇಕ್ ಎಂಬವರು ವ್ಯವಸ್ಥೆ ಮಾಡಿದ್ದರು. ಪರಸ್ಪರ ಮೊಬೈಲ್‌ನಲ್ಲಿ ಮಾತುಕತೆ ನಡೆಸಿರುವುದನ್ನು ಅಭಿಷೇಕ್ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿ ಸ್ವಾಮೀಜಿ ಆರೋಪಿಸಿದ್ದರು.
ಈ ಕುರಿತಂತೆ ದೇವಸ್ಥಾನದ ಟ್ರಸ್ಟಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿದ ಪೊಲೀಸರು ಅಭಿಷೇಕ್ ಎಂಬವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಬಾಯ್ಬಿಟ್ಟ ಅಭಿಷೇಕ್, ಸ್ವಾಮೀಜಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಾಹಿತಿ ನೀಡಿದ್ದರು.
ಈ ಮಾಹಿತಿಯ ಪ್ರಕಾರ ಪೊಕ್ಸೊ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಪೊಲೀಸರು, ಗುರುವಾರ ಸಂಜೆ ಮಠದಲ್ಲಿ ಪರಿಶೀಲನೆ ನಡೆಸಿದ್ದರು. ಆ ಭೇಟಿ ವೇಳೆ ಕೆಲವು ಮಹತ್ವದ ಸಾಕ್ಷ್ಯಗಳು ಲಭಿಸಿದ್ದರು. ಆಗ ಸಿಕ್ಕಿರುವ ದಾಖಲೆಗಳನ್ನು ಆಧರಿಸಿ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.