-->
ರಕ್ತ ಸಂಬಂಧಿಗಳ ಪರ GPAಗೆ ಆಸ್ತಿ ವರ್ಗಾವಣೆ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಅನ್ವಯವಾಗದು: ಕರ್ನಾಟಕ ಹೈಕೋರ್ಟ್

ರಕ್ತ ಸಂಬಂಧಿಗಳ ಪರ GPAಗೆ ಆಸ್ತಿ ವರ್ಗಾವಣೆ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಅನ್ವಯವಾಗದು: ಕರ್ನಾಟಕ ಹೈಕೋರ್ಟ್

ರಕ್ತ ಸಂಬಂಧಿಗಳ ಪರ GPAಗೆ ಆಸ್ತಿ ವರ್ಗಾವಣೆ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಅನ್ವಯವಾಗದು: ಕರ್ನಾಟಕ ಹೈಕೋರ್ಟ್





ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯಡಿ ಹೆಸರಿಸಲಾದ ರಕ್ತ ಸಂಬಂಧಿಗಳ ಪರವಾಗಿ ಬರೆದುಕೊಟ್ಟ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಆಸ್ತಿ ವರ್ಗಾವಣೆಯ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಅನ್ವಯವಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಎಸ್.ಕೆ. ಉದಯಶಂಕರ್ Vs ಬಿ.ಎಸ್. ನಾಗೇಂದ್ರ ಪ್ರಕರಣದಲ್ಲಿ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಕರ್ನಾಟಕ ಮುದ್ರಾಂಕ ಕಾಯ್ದೆ (Karnataka Stamp Act) ಸೆಕ್ಷನ್ 41 (eb)ರ ಪ್ರಕಾರ, ರಕ್ತ ಸಂಬಂಧಿಗಳನ್ನೇ ಅಟಾರ್ನಿಯನ್ನಾಗಿ ನೇಮಿಸಿದರೆ, ಆ GPA ಮೂಲಕ ಮಾಡುವ ಹಕ್ಕು ವರ್ಗಾವಣೆಗೆ ಹೆಚ್ಚುವರಿ ಮುದ್ರಾಂಕ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.


"ಭಾರತೀಯ ಒಪ್ಪಂದ ಕಾಯ್ದೆ ಹಾಗೂ ಪವರ್ಸ್‌ ಆಫ್ ಅಟಾರ್ನಿ ಕಾಯ್ದೆ 1882ರ ನಿಯಮಗಳ ಪ್ರಕಾರ ಪವರ್ ಆಫ್ ಅಟಾರ್ನಿಯನ್ನು ಜಾರಿಗೊಳಿಸಬಹುದು ಮತ್ತು ಅದಕ್ಕೆ ಕಾನೂನಿನ ಸಿಂಧುತ್ವ ದೊರೆಯುತ್ತದೆ.

ಅಧಿಕಾರ ಪತ್ರ ಯಾ ಅಟಾರ್ನಿ ಹೊಂದಿರುವವರು GPA ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಸ್ಥಿರ ಆಸ್ತಿಯ ಕ್ರಯ ಪತ್ರ ಯಾ ಹಕ್ಕು ವರ್ಗಾವಣೆ ಪತ್ರವನ್ನು ಕಾರ್ಯಗತಗೊಳಿಸಬಹುದು ಮತ್ತು ಹಕ್ಕುಗಳ ವರ್ಗಾವಣೆಯನ್ನು ಪಡೆಯುವವರ ಪರವಾಗಿ ಟೈಟಲ್ ಹಕ್ಕನ್ನು ವರ್ಗಾಯಿಸಬಹುದು" ಎಂದು ನ್ಯಾಯಪೀಠ ಹೇಳಿದೆ.


ಪ್ರಕರಣ: ಎಸ್.ಕೆ. ಉದಯಶಂಕರ್ Vs ಬಿ.ಎಸ್. ನಾಗೇಂದ್ರ

ಕರ್ನಾಟಕ ಹೈಕೋರ್ಟ್, WP 4593, 2022 Dated 2-06-2022


Ads on article

Advertise in articles 1

advertising articles 2

Advertise under the article