-->
ವರದಕ್ಷಿಣೆ ಕಿರುಕುಳ ಪ್ರಕರಣ: ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ವರದಕ್ಷಿಣೆ ಕಿರುಕುಳ ಪ್ರಕರಣ: ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ವರದಕ್ಷಿಣೆ ಕಿರುಕುಳ ಪ್ರಕರಣ: ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ





ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಮೂವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಹೊಳಲ್ಕೆರೆ ನ್ಯಾಯಾಲಯ ತೀರ್ಪು ನೀಡಿದೆ.


ಪ್ರಧಾನ ಸಿವಿಲ್ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಹೊಳಲ್ಕೆರೆ ಇದರ ನ್ಯಾಯಾಧೀಶರದಾದ ಶ್ರೀ ಉಮೇಶ ಎಂ.ಪಿ. ಅವರು ಈ ತೀರ್ಪು ಪ್ರಕಟಿಸಿದ್ದಾರೆ.


ಗಂಡ ಸಣ್ಣಪ್ಪ, ಅತ್ತೆ ರುದ್ರಮ್ಮ ಮತ್ತು ಮಾವ ರಾಮಪ್ಪ ವಿರುದ್ಧ ಪತ್ನಿ ಆಂಜುನಮ್ಮ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ದೂರು ಸ್ವೀಕರಿಸಿದ ಚಿಕ್ಕ ಜಾಜೂರು ಪೊಲೀಸರು ನ್ಯಾಯಾಲಯದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ದೂರುದಾರೆ ಆಂಜುನಮ್ಮ ಸಹಿತ 17 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿತ್ತು. 19 ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಿತ್ತು.


ಆರೋಪಿಗಳ ಪರವಾಗಿ ವಕೀಲರಾದ ಆರ್. ಹನುಮಂತಪ್ಪ ಅವರು ವಾದ ಮಂಡಿಸಿದ್ದರು. ಅಭಿಯೋಜನೆ ಪರವಾಗಿ ಆರೋಪಿಸಲಾದ ಪ್ರಕರಣ ನಡೆದಿದೆ ಎಂಬುದನ್ನು ನ್ಯಾಯಾಲಯ ನಂಬುವಂತಹ ಬಲವಾದ ಸಾಕ್ಷ್ಯಾಧಾರಗಳನ್ನು ಒಗಿಸಲು ವಿಫಲರಾಗಿದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಕಟಿಸಿದರು.


ಅಂತಿಮವಾಗಿ, ಆರೋಪಿಗಳಾಗಿ ವಿಚಾರಣೆ ಎದುರಿಸಿದ ಕೊಡಗವಳ್ಳಿ ಗ್ರಾಮದ ನಿವಾಸಿಗಳಾದ ಸಣ್ಣಪ್ಪ, ರಾಮಪ್ಪ, ರುದ್ರಮ್ಮ ಎಂಬುವವರನ್ನು ಖುಲಾಸೆಗೊಳಿಸಿ, ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿ ಆದೇಶ ಹೊರಡಿಸಿತು.

ಆರೋಪಿಗಳಾದ ಸಣ್ಣಪ್ಪ, ರಾಮಪ್ಪ, ರುದ್ರಮ್ಮ ಅವರು ಪಿರ್ಯಾದಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಹೊಳಲ್ಕೆರೆಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.


ಪ್ರಕರಣ: ಚಿಕ್ಕಜಾಜೂರು ಪೊಲೀಸ್ (ಅಂಜಿನಮ್ಮ) VS ಸಣ್ಣಪ್ಪ ಮತ್ತಿತರರು


Ads on article

Advertise in articles 1

advertising articles 2

Advertise under the article