ಸಂತ್ರಸ್ತೆಗೆ ಅತ್ಯಾಚಾರದ ಗಾಯ ತೋರಿಸು ಎಂದ ಜಡ್ಜ್ ಮೇಲೆ ಪ್ರಕರಣ ದಾಖಲು!
ಸಂತ್ರಸ್ತೆಗೆ ಅತ್ಯಾಚಾರದ ಗಾಯ ತೋರಿಸು ಎಂದ ಜಡ್ಜ್ ಮೇಲೆ ಪ್ರಕರಣ ದಾಖಲು!
ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರದ ಗಾಯ ತೋರಿಸು ಎಂದ ಜಡ್ಜ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಜೈಪುರದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ ದಲಿತ ಯುವತಿಗೆ ಬಟ್ಟೆ ಬಿಚ್ಚಿ ತೋರಿಸುವಂತೆ ಕೇಳಿದ ಆರೋಪದ ಮೇಲೆ ಪೊಲೀಸರು ಪ್ರಕರಣದ ದಾಖಲಿಸಿಕಂಡಿದ್ದಾರೆ. ಕರೌಲಿ ಜಿಲ್ಲೆಯ ಹಿಂಡೌನ್ ಕೋರ್ಟ್‌ನ ಮ್ಯಾಜಿಸ್ಟ್ರೇಟ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವೇಳೆ, ಮ್ಯಾಜಿಸ್ಟ್ರೇಟ್ ಅವರ ಸೂಚನೆಯಂತೆ ಬಟ್ಟೆ ಕಳಚಲು ಸಂತ್ರಸ್ತೆ ನಿರಾಕರಿಸಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 345 ಹಾಗೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆ ಮಾರ್ಚ್ 19ರಂದು ಅತ್ಯಾಚಾರಕ್ಕೊಳಗಾಗಿದ್ದರು. ಈ ಕುರಿತು ಹಿಂಡೌನ್ ಸದರ್ ಪೊಲೀಸ್ ಠಾಣೆಯಲ್ಲಿ ಮಾರ್ಚ್ 27ರಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲಿಸರು ಮಾಹಿತಿ ನೀಡಿದ್ಧಾರೆ.
ನ್ಯಾಯಾಲಯದಲ್ಲಿ ಆಗಿರುವ ಘಟನೆಯ ಬಗ್ಗೆ ಮಾರ್ಚ್ 30ರಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೀನಾ ಹೇಳಿದ್ದಾರೆ.