ಸತತ 4 ದಿನ ಕೋರ್ಟ್‌ಗೆ ರಜೆ: ರಾಜ್ಯಾದ್ಯಂತ ನ್ಯಾಯಾಂಗ ಸೇವೆ ಸ್ಥಗಿತ, ವಕೀಲರಿಗೆ ವೀಕೆಂಡ್ ಮಜಾ
Tuesday, April 9, 2024
ಸತತ 4 ದಿನ ಕೋರ್ಟ್‌ಗೆ ರಜೆ: ರಾಜ್ಯಾದ್ಯಂತ ನ್ಯಾಯಾಂಗ ಸೇವೆ ಸ್ಥಗಿತ, ವಕೀಲರಿಗೆ ವೀಕೆಂಡ್ ಮಜಾ
ಸತತ ನಾಲ್ಕು ದಿನಗಳ ಕಾಲ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಈ ವಾರದ ಕೊನೆಯ ಕರ್ತವ್ಯದ ದಿನವಾಗಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಕೀಲರು, ನ್ಯಾಯಾಂಗ ಅಧಿಕಾರಿಗಳು, ನೌಕರರು ವೀಕೆಂಡ್ ರಜೆಯ ಮಜಾವನ್ನು ಅನುಭವಿಸಬಹುದು.
11-04-2024ರಂದು ಗುರುವಾರ ರಂಜಾನ್ ಪ್ರಯುಕ್ತ ರಾಜ್ಯದ ಎಲ್ಲ ನ್ಯಾಯಾಲಯಗಳು ಕಾರ್ಯನಿರ್ವಹಿಸುವುದಿಲ್ಲ. ಆ ದಿನ ಕೋರ್ಟ್ ಕಲಾಪಗಳು ನಡೆಯುವುದಿಲ್ಲ.
ಶುಕ್ರವಾರ 12-04-2024ರಂದು ನ್ಯಾಯಾಂಗ ಇಲಾಖೆ ಈಗಾಗಲೇ ರಜೆ ಘೋಷಣೆ ಮಾಡಿರುವುದರಿಂದ ಆ ದಿನವೂ ರಾಜ್ಯದ ಯಾವುದೇ ಕೋರ್ಟ್ ಕಲಾಪಗಳು ನಡೆಯುವುದಿಲ್ಲ.
13-04-2024ರಂದು ಶನಿವಾರ ಎರಡನೇ ಶನಿವಾರದ ಪ್ರಯುಕ್ತ ಸರ್ಕಾರಿ ಕಚೇರಿಗಳ ಸಹಿತ ಎಲ್ಲ ನ್ಯಾಯಾಲಯಗಳಿಗೂ ರಜೆ ಇರಲಿದೆ.
ಇದರಿಂದ ಸತತ ನಾಲ್ಕು ದಿನಗಳ ಕಾಲ ವಕೀಲರು ಮತ್ತು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ನೌಕರರಿಗೆ ರಜೆಯ ಮಜಾ ದೊರೆಯಲಿದೆ.