ಕೇಜ್ರೀವಾಲ್ ಬಂಧನ: ಸೋಮವಾರ ಜಾಮೀನು ಅರ್ಜಿ ಸುಪ್ರೀಂ ವಿಚಾರಣೆ
ಕೇಜ್ರೀವಾಲ್ ಬಂಧನ: ಸೋಮವಾರ ಜಾಮೀನು ಅರ್ಜಿ ಸುಪ್ರೀಂ ವಿಚಾರಣೆ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಇದನ್ನು ಪ್ರಶ್ನಿಸಿ ಕೇಜ್ರೀವಾಲ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ನ್ಯಾ.. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಾಂಕರ್ ದತ್ತ ಅವರಿರುವ ವಿಭಾಗೀಯ ನ್ಯಾಯಪೀಠ, ಕೇಜ್ರೀವಾಲ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ದೆಹಲಿ ಹೈಕೋರ್ಟ್ ಅರವಿಂದ ಕೇಜ್ರೀವಾಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಸಿಎಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದಲ್ಲಿ ದೆಹಲಿ ಸಿಎಂ ಶಾಮೀಲಾತಿ ಬಗ್ಗೆ ಪುರಾವೆ ಇದೆ ಎಂದು ಹೈಕೋರ್ಟ್ ನ್ಯಾ. ಸ್ವರ್ಣಕಾಂತ್ ಶರ್ಮಾ ಆದೇಶದಲ್ಲಿ ತಿಳಿಸಿದ್ದರು. ಕಿಕ್ ಬ್ಯಾಕ್ ಆಗಿ ಪಡೆದ ಹಣ 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು.
2021-22ರ ದೆಹಲಿ ಅಬಕಾರಿ ನೀತಿಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 2022ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಇದರಿಂದಾಗಿ ಮನಿ ಲಾಂಡರಿಂಗ್ ತನಿಖೆಯಾಗಿ ಪರಿವರ್ತನೆಯಾಗಿತ್ತು.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ನೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 20220ರಂದು ಪ್ರಕರಣ ದಾಖಲಿಸಿಕೊಂಡಿತ್ತು.