ಸ್ಥಿರಾಸ್ತಿ ನೋಂದಾವಣೆ ಆದ ಬಳಿಕ ತನ್ನಿಂತಾನೆ ಖಾತೆ ಬದಲಾವಣೆ: ಕಂದಾಯ ಇಲಾಖೆಗೆ ಖರೀದಿದಾರರು ಪ್ರತ್ಯೇಕ ಮಾಹಿತಿ ನೀಡಬೇಕಾಗಿಲ್ಲ
Friday, April 26, 2024
ಸ್ಥಿರಾಸ್ತಿ ನೋಂದಾವಣೆ ಆದ ಬಳಿಕ ತನ್ನಿಂತಾನೆ ಖಾತೆ ಬದಲಾವಣೆ: ಕಂದಾಯ ಇಲಾಖೆಗೆ ಖರೀದಿದಾರರು ಪ್ರತ್ಯೇಕ ಮಾಹಿತಿ ನೀಡಬೇಕಾಗಿಲ್ಲ
ನೋಂದಾಯಿತ ದಸ್ತಾವೇಜು ಮೂಲಕ ಸ್ಥಿರಾಸ್ತಿ ನೋಂದಾವಣೆ ಆದ ಬಳಿಕ ಖರೀದಿದಾರರು ಕಂದಾಯ ಇಲಾಖೆಗೆ ಪ್ರತ್ಯೇಕ ಅರ್ಜಿ ನೀಡಬೇಕಾಗಿಲ್ಲ. ಭೂಕಂದಾಯ ಕಾಯ್ದೆಯ ಸೆಕ್ಷನ್ 128(4) ಪ್ರಕಾರ ಖಾತೆ ಬದಲಾವಣೆಯನ್ನು ಕಂದಾಯ ಇಲಾಖೆ ಮಾಡತಕ್ಕದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
when a registered conveyance takes place, no duty cast on the purchaser to intimate such transfer to the revenue authorities. Mutation entry has to take place as per section 128(4) of the Karnataka Land Revenue Act 1964, held Karnataka High Court