ಮತಯಂತ್ರ: ಇವಿಎಂ ಕುರಿತ RTI ಅರ್ಜಿಗೆ ಉತ್ತರ ನೀಡದ ಎಲೆಕ್ಷನ್ ಕಮಿಷನ್: ಮಾಹಿತಿ ಆಯೋಗ ಆಕ್ರೋಶ
Saturday, April 13, 2024
ಮತಯಂತ್ರ: ಇವಿಎಂ ಕುರಿತ RTI ಅರ್ಜಿಗೆ ಉತ್ತರ ನೀಡದ ಎಲೆಕ್ಷನ್ ಕಮಿಷನ್: ಮಾಹಿತಿ ಆಯೋಗ ಆಕ್ರೋಶ
ಮತ ಯಂತ್ರಗಳ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಚುನಾವಣಾ ಆಯೋಗವು ಒಂದು ವರ್ಷಕ್ಕೂ ಹೆಚ್ಚು ಕಾಲ ಉತ್ತರವೇ ನೀಡಿಲ್ಲ. ಈ ಬಗ್ಗೆ ಕೇಂದ್ರ ಮಾಹಿತಿ ಆಯೋಗ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ಚುನಾವಣಾ ಆಯೋಗದ ಕ್ರಮಗಳು ಮಾಹಿತಿ ಹಕ್ಕು ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಆಗಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಹೇಳಿದ್ದಾರೆ.
ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಲಿಖಿತ ಪತ್ರ ಬರೆದಿರುವ ಅವರು, ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿದ್ದಾರೆ. ಆರ್‌ಟಿಐ ಅರ್ಜಿಗೆ ಉತ್ತರ ನೀಡದ ಆಯೋಗ ಮತ್ತು ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಹಿತಿ ಆಯೋಗ, ಲಿಖಿತ ವಿವರಣೆ ನೀಡುವಂತೆ ತಾಕೀತು ಮಾಡಿದೆ.