-->
Consumer Case: ವಾಣಿಜ್ಯ ಉದ್ದೇಶದ ಸೇವೆ: ಸಾಬೀತುಪಡಿಸುವ ಹೊಣೆಗಾರಿಕೆ ಸೇವಾ ಪೂರೈಕೆದಾರರದ್ದು: ಸುಪ್ರೀಂ ಕೋರ್ಟ್‌

Consumer Case: ವಾಣಿಜ್ಯ ಉದ್ದೇಶದ ಸೇವೆ: ಸಾಬೀತುಪಡಿಸುವ ಹೊಣೆಗಾರಿಕೆ ಸೇವಾ ಪೂರೈಕೆದಾರರದ್ದು: ಸುಪ್ರೀಂ ಕೋರ್ಟ್‌

ವಾಣಿಜ್ಯ ಉದ್ದೇಶದ ಸೇವೆ: ಸಾಬೀತುಪಡಿಸುವ ಹೊಣೆಗಾರಿಕೆ ಸೇವಾ ಪೂರೈಕೆದಾರರದ್ದು: ಸುಪ್ರೀಂ ಕೋರ್ಟ್‌





ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸೇವೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯಲಾಗಿದೆ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆಯು ದೂರುದಾರರದ್ದಲ್ಲ. ಬದಲಾಗಿ ಆ ಜವಾಬ್ದಾರಿಯು ಸೇವಾ ಪೂರೈಕೆದಾರರ ಮೇಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕ ಸ್ನೇಹಿ ಮತ್ತು ಪ್ರಯೋಜನಕಾರಿ ಕಾನೂನಾಗಿದ್ದು, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಉದ್ದೇಶಿಸಿರುವ ನಕಾರಾತ್ಮಕ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಪುನರುಚ್ಚರಿಸಿತು.


"ರಚನಾತ್ಮಕವಾಗಿ, 'ಗ್ರಾಹಕ' ಎಂಬ ಪದದ ವ್ಯಾಖ್ಯಾನದಲ್ಲಿ ಮೂರು ವಿಭಾಗಗಳಿವೆ. ನಾವು ವಿಭಾಗ 2(7)(i) ಅನ್ನು ವಿವರಣೆಯ ವಿಷಯವಾಗಿ ನೋಡಬಹುದು. ಮೊದಲ ಭಾಗವು ಒಬ್ಬ ವ್ಯಕ್ತಿಗೆ ಗ್ರಾಹಕನಾಗಿ ಅರ್ಹತೆ ಪಡೆಯಲು ನ್ಯಾಯವ್ಯಾಪ್ತಿಯ ಪ್ರಾಥಮಿಕ ಅಗತ್ಯದ ಬಗ್ಗೆ ಹೇಳುತ್ತದೆ. ಇಲ್ಲಿ ಸರಕುಗಳ ಖರೀದಿಯು ಹಣಕ್ಕಾಗಿ ನಡೆದಿರಬೇಕು.


ಎರಡನೆಯ ಭಾಗವು 'ಹೊರತಾಗಿನ ಷರತ್ತು'(Exclusion Clause) ಆಗಿದ್ದು ಅದು ಗ್ರಾಹಕರ ವ್ಯಾಖ್ಯಾನದಿಂದ ವ್ಯಕ್ತಿಯನ್ನು ಹೊರಗಿಡುವ ವಿಚಾರ ಹೊಂದಿದೆ. 'ಮರುಮಾರಾಟ'ದ ಉದ್ದೇಶಕ್ಕೆ ಅಥವಾ 'ವಾಣಿಜ್ಯ ಉದ್ದೇಶಕ್ಕೆ' ಸರಕುಗಳನ್ನು ಪಡೆದಿದ್ದರೆ ಇದು ಅನ್ವಯಿಸುತ್ತದೆ.


ಮೂರನೇ ಭಾಗವು ಹೊರಗಿಡುವ ಷರತ್ತಿಗೆ ಒಂದು ಅಪವಾದವಾಗಿದೆ . ಇದು 'ವಾಣಿಜ್ಯ ಉದ್ದೇಶ'ದ ವ್ಯಾಪ್ತಿಯನ್ನು ಸೀಮಿತಗೊಳಿಸುವುದಕ್ಕೆ ವಿವರಣೆ ನೀಡುತ್ತದೆ.


"ಸೇವೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯಲಾಗಿದೆ ಎಂದು ಯಾವಾಗಲೂ ಸೇವಾ ಪೂರೈಕೆದಾರರು ಪ್ರತಿಪಾದಿಸುವ ಕಾರಣ, ಅದನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಅದು ಭರಿಸಬೇಕಾಗುತ್ತದೆ. ಇದಲ್ಲದೆ, ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕ ಸ್ನೇಹಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮತ್ತು ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಉದ್ದೇಶಿಸಿರುವ ಪ್ರಯೋಜನಕಾರಿ ಕಾನೂನು" ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಅರ್ಜಿದಾರ ಸಂಸ್ಥೆಯಾದ ಶ್ರೀರಾಮ್ ಚಿಟ್ಸ್ ಪ್ರೈ. ಲಿ. ದೂರುದಾರರು ವಾಣಿಜ್ಯ ಉದ್ದೇಶಕ್ಕಾಗಿ ಪಡೆದ ಸೇವೆ ಆಗಿರುವ ಕಾರಣಕ್ಕೆ ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ 'ಗ್ರಾಹಕ' ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ. ಹಾಗಾಗಿ, ದೂರುದಾರ ಕಂಪನಿಯು ಯಾವುದೇ ಪರಿಹಾರವನ್ನು ಪಡೆಯಲು ಅರ್ಹತೆ ಪಡೆದಿಲ್ಲ ಎಂದು ಎಂದು ವಾದಿಸಿತ್ತು.


ಆದರೆ, ಈ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿದಾರರು ತನ್ನ ವಾದವನ್ನು ಸಮರ್ಥಿಸಲು ಯಾವುದೇ ಯಾವುದೇ ಪುರಾವೆಯನ್ನಾಗಲೀ, ಸಾಕ್ಷ್ಯವನ್ನಾಗಲೀ ನ್ಯಾಯಾಲಯದ ಮುಂದಿಟ್ಟಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.


ಪ್ರಕರಣ: ಶ್ರೀರಾಮ್ ಚಿಟ್ಸ್ ಪ್ರೈ. ಲಿ.Vs ರಾಘಾಚಂದ್ ಅಸೋಸಿಯೇಟ್ಸ್‌

ಸುಪ್ರೀಂ ಕೋರ್ಟ್, Dated 10-05-2024







Ads on article

Advertise in articles 1

advertising articles 2

Advertise under the article