-->
ಜ್ಯೇಷ್ಟತೆ ಹೊಂದಿದ ಸರ್ಕಾರಿ ನೌಕರರಿಗೆ ಕಡ್ಡಾಯ ಬಡ್ತಿ: ಎಲ್ಲ ಇಲಾಖೆ ಸರ್ಕಾರಿ ನೌಕರರಿಗೂ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!

ಜ್ಯೇಷ್ಟತೆ ಹೊಂದಿದ ಸರ್ಕಾರಿ ನೌಕರರಿಗೆ ಕಡ್ಡಾಯ ಬಡ್ತಿ: ಎಲ್ಲ ಇಲಾಖೆ ಸರ್ಕಾರಿ ನೌಕರರಿಗೂ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!

ಜ್ಯೇಷ್ಟತೆ ಹೊಂದಿದ ಸರ್ಕಾರಿ ನೌಕರರಿಗೆ ಕಡ್ಡಾಯ ಬಡ್ತಿ: ಎಲ್ಲ ಇಲಾಖೆ ಸರ್ಕಾರಿ ನೌಕರರಿಗೂ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!





ಸ್ವಂತ ಅರ್ಹತೆ ಮೇಲೆ ನೇಮಕವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಮೀಸಲಾತಿ ಕೋಟಾದಡಿ ಪರಿಗಣಿಸದೆ ಸಾಮಾನ್ಯ ವರ್ಗದಲ್ಲೇ ಮುಂಬಡ್ತಿ ಕೊಡಲು ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.


ಅದೇ ರೀತಿ, ಎಲ್ಲ ವರ್ಗದ ಸರ್ಕಾರಿ ನೌಕರರಿಗೂ ಆರು ತಿಂಗಳಿಗೊಮ್ಮೆ ಕಡ್ಡಾಯ ಮುಂಬಡ್ತಿ ಕೊಡುವ ವ್ಯವಸ್ಥೆ ಜಾರಿ ತರಲು ನಿರ್ಧರಿಸಿದೆ. ಇದರಿಂದಾಗಿ, ಬಡ್ತಿಗಾಗಿ ಕಾಯುವ ಸಂಕಷ್ಟ ತಪ್ಪಲಿದೆ. ಹಾಗೆಯೇ, ಎಲ್ಲ ಇಲಾಖೆಗಳಿಗೂ ಒಂದೇ ರೀತಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ ಅನುಷ್ಟಾನಕ್ಕು ಸರ್ಕಾರ ಒಲವು ತೋರಿದೆ.


ಕರ್ನಾಟಕ ನಾಗರಿಕ ಸೇವೆಗಳ ನಿಯಮಾವಳಿಗಳ (ಕೆಸಿಎಸ್‌ಆರ್‌) ಪ್ರಕಾರ ಪ್ರತಿ ವರ್ಷ ಸರ್ಕಾರಿ ನೌಕರರ ಜ್ಯೇಷ್ಟತಾ ಪಟ್ಟಿ ಸಿದ್ದಪಡಿಸಿ , ಅರ್ಹತೆಗೆ ಅನುಗುಣವಾಗಿ ಮುಂಬಡ್ತಿ ಕೊಡಲೇಬೇಕು. ಆದರೆ, ಕೆಲವೊಂದು ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಪ್ರಮುಖ ಇಲಾಖೆಗಳಲ್ಲಿ ಸಮರ್ಪಕವಾಗಿ ಮುಂಬಡ್ತಿ ನಿಯಮ ಪಾಲನೆ ಆಗದಿರುವ ಬಗ್ಗೆ ನೌಕರರ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.


ಸರ್ಕಾರಿ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಸಮಾಲೋಚನಾ ಸಮಿತಿ ಸಭೆಯಲ್ಲಿ ಹೊಸ ವ್ಯವಸ್ಥೆ ಜಾರಿ ಬಗ್ಗೆ ಚರ್ಚೆ ನಡೆಯಿತು. ಸಭೆಯ ನಡಾವಳಿಯ ಅನುಸಾರ ಕೂಡಲೇ ಕ್ರಮ ಕೈಗೊಂಡು ಅನುಪಾಲನಾ ವರದಿ ಕಳುಹಿಸುವಂತೆ ನವೆಂಬರ್ 15ರಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.


ಸರ್ಕಾರಿ ನೌಕರರಿಗೆ ಕಡ್ಡಾಯ ಬಡ್ತಿ ವಿಷಯದಲ್ಲಿ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳಲ್ಲೂ ಒಂದೇ ರೀತಿಯ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಈಗ ಒಂದೊಂದು ರೀತಿಯ ನಿಯಮಾವಳಿ ಇದೆ. ಈ ನಿಯಮಗಳನ್ನು ನೇಮಕಾತಿ ನಿಯಮ ಪರಿಷ್ಕರಿಸುವ ಬಗ್ಗೆ ಜಂಟಿ ಸಮಾಲೋಚನಾ ಸಮಿತಿ ಒಲವು ತೋರಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುದಾರಣಾ ಇಲಾಖೆಗೆ ಸೂಚಿಸಲಾಗಿದೆ.



Ads on article

Advertise in articles 1

advertising articles 2

Advertise under the article