-->
ಕಂಪೆನಿ ವಿರುದ್ಧ ಕ್ರಿಮಿನಲ್ ಪ್ರಕರಣ: ಈ ಅಂಶ ಗಮನದಲ್ಲಿ ಇಡಲೇಬೇಕು- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಕಂಪೆನಿ ವಿರುದ್ಧ ಕ್ರಿಮಿನಲ್ ಪ್ರಕರಣ: ಈ ಅಂಶ ಗಮನದಲ್ಲಿ ಇಡಲೇಬೇಕು- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಕಂಪೆನಿ ವಿರುದ್ಧ ಕ್ರಿಮಿನಲ್ ಪ್ರಕರಣ: ಈ ಅಂಶ ಗಮನದಲ್ಲಿ ಇಡಲೇಬೇಕು- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಕ್ರಿಮಿನಲ್ ಪ್ರಕರಣಗಳಲ್ಲಿ ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಮಾಡದೇ ಇದ್ದರೆ, ಆಗ ಅದರ ನಿರ್ದೇಶಕರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕನಿಷ್ಟ ವೇತನ ಕಾಯ್ದೆಯನ್ನು ಉಲ್ಲಂಘನೆ ಅಪರಾಧ ಪ್ರಕರಣಗಳಲ್ಲಿ ಕಂಪೆನಿಯನ್ನೂ ಅಗತ್ಯ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.


ತನ್ನ ವಿರುದ್ಧ ಶಿವಮೊಗ್ಗದ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಬೇಕು ಎಂದು ಕೋರಿ ಪಿ.ಪಿ. ಸೈಯದ್ ಪಾಷಾ ಆಲಿಯಾಸ್ ಎಸ್. ಅಯೂಬ್ ಮತ್ತು ಸಮೀರ್ ಸುಲ್ತಾನ ಆಲಿಯಾಸ್ ಶಮೀಮ್ ಸುಲ್ತಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ತೀರ್ಪು ಪ್ರಕಟಿಸಿದ್ದು, ಅರ್ಜಿಯನ್ನು ಪುರಸ್ಕರಿಸಿತು.



ಅರ್ಜಿದಾರರು ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ನಿರ್ದೇಶಕರಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಅವರು ಕಂಪೆನಿಯ ಪರವಾಗಿ ಕಾರ್ಯನಿರ್ವಹಿಸುವ ಕಾರಣದಿಂದ ಮೊದಲಿಗೆ ಕಂಪನಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕಿದೆ ಎಂದು ನ್ಯಾಯಪೀಠ ಗಮನಿಸಿತು.


ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಹೆಸರಿಸದೇ ಇದ್ದು, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದೇ ಇದ್ದರೆ ಆಗ ಅಂತಹ ಪ್ರಕರಣ ಊರ್ಜಿತವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.


ಪ್ರಕರಣದ ಹಿನ್ನೆಲೆ

ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾರ್ಮಿಕ ಅಧಿಕಾರಿ ಸ್ಥಳೀಯ ನ್ಯಾಯಾಲಯದಲ್ಲಿ ಅದರ ನಿರ್ದೇಶಕರ ವಿರುದ್ಧ ಕನಿಷ್ಟ ವೇತನ ಕಾಯ್ದೆ ಸೆಕ್ಷನ್ 25ರ ನಿಯಮ 7.9 ಹಾಗೂ 21ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದನ್ನು ವಿಚಾರಣೆಗೆ ಪರಿಗಣಿಸಿದ್ದ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶ ನೀಡಿತ್ತು.


ಪ್ರಕರಣ: ಪಿ.ಎಸ್. ಅಯೂಬ್ ಮತ್ತೊಬ್ಬರು Vs ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್, WP 14973/2023 Dated 26-03-2024

Ads on article

Advertise in articles 1

advertising articles 2

Advertise under the article